ಮಾಡಾಳು ಸ್ವರ್ಣಗೌರಿ
#ಮಾಡಾಳು #ಸ್ವರ್ಣಗೌರಿ
ಹಾಸನಜಿಲ್ಲೆ ಅರಸೀಕೆರೆ ತಾ ಕಣಕಟ್ಟೆ ಹೋಬಳಿಯ ಮಾಡಾಳು ಪುಟ್ಟ ಗ್ರಾಮ ಮಾರ್ಗ:- (ಆರಸೀಕೆರೆ -ಜೆ.ಸಿ.ಪುರ- ದೊಡ್ಡಮೇಟಿಕುರ್ಕೆ- ಮಾಡಾಳು ಅಥವ ತಿಪಟೂರು- ಹೊನ್ನವಳ್ಳಿ- ಜೆ.ಸಿ ಪುರ ಮಾಡಾಳು). ವರ್ಷಕ್ಕೋಮ್ಮೆ ಅಪಾರ ಭಕ್ತಸಮೂಹವನ್ನು ತನ್ನತ್ತ ಸೆಳೆಯುತ್ತದೆ, ಕಾರಣ ಇಲ್ಲಿನ ಆರಾಧ್ಯ ದೇವತೆ ಗೌರಮ್ಮ. 🙏ಗೌರಮ್ಮನವರು ಮೂಲತಃ ಸಂಪಿಗೆ ಗ್ರಾಮದವರಂತೆ ಒಮ್ಮೆ ಮಾಡಾಳಿನ ಗೌಡರಾದ #ಮುದ್ಧೇಗೌಡರು ಮತ್ತು ಕೋಡಿಮಠದ ಅಂದಿನ ಗುರುಗಳಾದ # ಪರಮ ಪೂಜ್ಯ ಶಿವಲಿಂಗಸ್ವಾಮಿಜಿಗಳೊಡನೆ ಸಂಪಿಗೆ ಗೌರಿ ಜಾತ್ರೆಗೆ ಹೋಗಿ ಹಿಂದಿರುವಾಗ ಸಮೀಪದ ಹೊಳೆಯಿಂದ ಒಂದು ಧ್ವನಿ ನಾನು ನಿಮ್ಮೊಡನೆ ಬರುತ್ತೇನೆ ಎಂದ ಹಾಗಾಯಿತಂತೆ, ಆ ದಿನ ರಾತ್ರಿ ಗೌಡರ ಮನೆಯ ಬಾವಿಯಲ್ಲಿ ಬಂದು ನೆಲೆಸಿದಂತೆ ಕನಸು ಕಂಡ ಮುದ್ದೇಗೌಡು ಈ ಬಗ್ಗೆ ಗುರುಗಳಲ್ಲಿ ವಿಚಾರಿಸಿದಾಗ ತಮ್ಮ ದಿವ್ಯ ದೃಷ್ಟಿಯಿಂದ ಅರಿತ ಸ್ವಾಮಿಗಳು ತಾಯಿ ಸ್ವರ್ಣಗೌರಿ ಇಲ್ಲಿ ನಿಮ್ಮ ಮನೆಯಲ್ಲಿ ನೆಲಿಸಿರುವುದಾಗಿ ತಿಳಿಸಿದ ಮೇಲೆ ಪ್ರತಿ ಶ್ರಾವಣದಲ್ಲಿ ಮೃತ್ಯುಕೆ ತಂದು ಗೌರಿ ಮೂರ್ತಿಯನ್ನ ಸಿದ್ದಮಾಡಿತ್ತಾರೆ,
ಆಚರಣೆ
( ಸ್ವರ್ಣ ಗೌರಿ ನೆಲೆಸುವುದು ಗೌರಿ ಹಬ್ಬದ ದಿನದಿಂದ 10 ದಿನ ಮಾತ್ರ ಉಳಿದ ದಿನದಲ್ಲಿ ಬಸವಣ್ಣನ ದೇವಸ್ಥಾನದ ಲ್ಲಿ ತಾಯಿಯವರ ಪೋಟೋ ಇಟ್ಟು ಪೂಜಿಸಲಾಗುತ್ತದೆ. ಪ್ರತಿ ದಿನ ಪೂಜೆ ಅನ್ನದಾಸೋಹ ಇರುತ್ತದೆ)
ಸ್ವರ್ಣಗೌರಿಯನ್ನು #ಅರಿಶಿಣ ಮತ್ತು #ಮೃತ್ಯುಕೆ ಎಂಬ ಪವಿತ್ರ ಮಣ್ಣಿನಿಂದ ತಯಾರಿಸಲಾಗುತ್ತದೆ, ಗೌರಿಯನ್ನು ಹೀಗೆ ತಯಾರಿಸಬೇಕು ಎಂದು ಶಿವಲಿಂಗ ಸ್ವಾಮಿಗಳು ನೀಡಿದ ಗುರುತಿನ ದಾರವಿದೆ ಅದರ ಪದ್ದತಿಯಂತೆ ನಿರ್ಮಿಸಬೇಕು ಇಲ್ಲವಾದಲ್ಲಿ ಮೂರ್ತಿ ನಿಲ್ಲುವುದಿಲ್ಲ, ಮೂರ್ತಿ ಕಾರ್ಯ ಪೂರ್ಣಗೊಂಡ ನಂತರ ದೇವಿಗೆ #ವಜ್ರದ_ಮೂಗೂತಿ ಧರಿಸುತ್ತಾರೆ ಆ ಮೂಗೂತಿ ಧರಿಸಿದ ಮೇಲೆ ಅಮ್ಮನಿಗೆ ಜೀವಕಳೆ ಬರುತ್ತದೆ, ಇದಾದ ನಂತರ #ಗೌರಿಹಬ್ಬದಂದು ಗ್ರಾಮದ #ಬಸವಣ್ಣನ ಗುಡಿಯಲ್ಲಿ ಕುದುರೆಯ ಮೇಲೆ ಅಶ್ವರೂಡಲಾಗಿ ಒಂಬತ್ತು ದಿನಗಳ ಕಾಲ ತ್ರಿಕಾಲ ಪೂಜೆಯೊಂದಿಗೆ ಆರಾಧಿಸುತ್ತಾರೆ ದೇವಿಗೆ ಒಡವೆ ವಸ್ತು ಬಂಗಾರಕ್ಕಿಂತ ಹೆಚ್ಚು ಪ್ರೀತಿ #ಕರ್ಪೂರ, ಹೀಗಾಗಿ ಭಕ್ತರು ತಮ್ಮ ಶಕ್ತಾನುಸಾರ ಐದು ಹತ್ತರಿಂದ ಐವತ್ತು ಸಾವಿರ ಅದಕ್ಕೂ ಹೆಚ್ಚಿನ ಕರ್ಪೂರ ಸುಡುತ್ತಾರೆ, ಅಮ್ಮನ ಗುಡಿಯ ಮುಂದಿನ ಕರ್ಪೂರದಗುಂಡಿ ಒಂಬತ್ತು ದಿನಗಳ ಕಾಲ ಆರೋದಿಲ್ಲ, ಇದಲ್ಲದೆ ಕೆಲವರು ಮಡಿಲಕ್ಕಿ ಸೀರೆ ಮಂಗಳ ದ್ರವ್ಯ ಅರ್ಪಿಸುತ್ತಾರೆ ಅಮ್ಮನವರಿಗೆ ಅರ್ಪಿಸಿದ ಸೀರೆಗಳನ್ನು ಯಾರೂ ಬಳಸುವಂತಿಲ್ಲ ಅದರಿಂದ ಕೆಡುಕುಟಾಂಗುತ್ತದೆ ಎಂಬ ನಂಬಿಕೆ ಇದೆ, ಆದ್ದರಿಂದ ಅವುಗಳನ್ನು ಒಂದೆಡೆ ಇರಿಸಲಾಗಿದೆ ಬರುವ ಭಕ್ತ ಜನಕ್ಕೆ ದಿನದ 24 ಗಂಟೆಯೂ ಅನ್ನದಾಸೋಹ ಇರುತ್ತದೆ, ಸಾರಿಗೆ ಇಲಾಖೆಯಿಂದ ಅರಸೀಕೆರೆ ಹಾಗು ತಿಪಟೂರಿನಿಂದ ವಿಶೇಷ ಬಸ್ ಸೌಲಭ್ಯ ಮಾಡಿರುತ್ತಾರೆ,
ಹೀಗೆ ಒಂಬತ್ತು ದಿನ ಕೈಲಾಸವನ್ನೆ ಧರೆಗಿಳಿಸುವ ಗೌರಮ್ಮ ಕಡೆಯದಿನ (09ನೇ ದಿನ ರಾತ್ರಿ ಚಂದ್ರಮಂಡಲದಲ್ಲಿ ವಿರಾಜಮಾನಲಾಗುವ ತಾಯಿ ತಿಮ್ಮಪ್ಪ ದೇವರು ಹಾಗು ಬಸವಣ್ಣನವರ ಜೊತೆ ದುಗ್ಗಳ ಸೇವೆಯನ್ನು ( ಸಾವಿರಾರು ಮುತೈದೆಯರು ಮಕ್ಕಳು ತಾಯಿಯವರ ಮುಂದೆ ಕರ್ಪೂರದ ಬಟ್ಟಲನ್ನು ತಮ್ಮ ತಲೆಯ ಮೇಲೆ ಒತ್ತು ಸಲ್ಲಿಸುವ ಸೇವೆಯು ಕೈಲಾಸವನ್ನೇ ಧರೆಗೆ ತಂದು ಲಕ್ಷಾಂತರ ಭಕ್ತರಿಗೆ ಅರೆಸಿ ಆಶಿರ್ವದಿಸುವ ಗೌರಿಯು ಆ ದಿನ ಗ್ರಾಮದ ಎಲ್ಲಾ ಮನೆಗಳಿಗೂ ತೆರಳಿ ಮಡಲಕ್ಕಿ ಅರಿಶಿಣ ಕುಂಕುಮ ಪಡೆದು ಗ್ರಾಮದ ಕಲ್ಯಾಣಿಗೆ ಬರುತ್ತಾರೆ ಅಲ್ಲಿ ಮಹಾಮಂಗಳಾರತಿ ನೆರವೇರುತ್ತದೆ ಕೋಡಿ ಮಠದ ಈಗಿನ ಪೀಠಾಧಿಪತಿಗಳು ರಾಜ್ಯದ ಇತರೆ ಮಠ ಮಾನ್ಯದ ಪೂಜ್ಯ ಗುರುಗಳ ಸಮ್ಮುಖದಲ್ಲಿ ಕೋಡಿಮಠದ ಶ್ರೀಗಳು ದೇವಿಗೆ ಧರಿಸಿದ ಮೂಗೂತಿ ತೆಗೆಯುತ್ತಾರೆ ಕರ್ಪೂರದ ಮಹಾ ಜ್ವಾಲೆ ಧಗಧಗಿಸುತ್ತದೆ ಭಕ್ತರ ಜಯಘೋಶ ಮೊಳಗುತ್ತದೆ ವರುಣ ದೇವನ ಸಣ್ಣ ಸಿಂಚನವಾಗುತ್ತದೆ ಆಗ ದೇವಿಯ ಕಣ್ಣಲ್ಲಿ ನೀರು ಜಿನುಗುತ್ತದೆ ಇದೇ ಇಲ್ಲಿನ ಮಹಿಮೆ ಪವಾಡ ತವರುಮನೆ ತೊರೆದು ಹೋಗುವ ಹೆಣ್ಣುಮಕ್ಕಳು ಭಾವುಕವಾಗುವಂತೆ ಗೌರಿದೇವಿಯೂ ಭಾವುಕಳಾಗುತ್ತಾಳೆ, ಅಂತಿಮವಾಗಿ ಕಲ್ಯಾಣಿಯಲ್ಲಿ ಗೌರಿಯನ್ನು ವಿಸರ್ಜಿಸುವ ಮೂಲಕ ಗೌರಿ ಹಬ್ಬದ ಸಡಗರ ಕೊನೆಗೊಳ್ಳುತ್ತದೆ
ಇಲ್ಲಿನ ಮತ್ತೊಂದು ಪವಾಡವೆಂದರೆ
ಮದುವೆಯಾಗದ ಕನ್ಯಯರಿಗೆ ಮದುವೆಯ ಯೋಗ ಮಕ್ಕಳಿಲ್ಲದ ದಂಪತಿಗಳಿಗೆ ಮಕ್ಕಳ ಭಾಗ್ಯವನ್ನು ಕರುಣಿಸುವ ತಾಯಿ ಮುತೈದೆ ಭಾಗ್ಯವನ್ನು ನೀಡಿ ಅರೆಸುತ್ತಾಳೆ ತಮ್ಮ ಇಷ್ಟಾರ್ಥಗಳನ್ಬು ಕರ್ಪೂರಕ್ಕೆ ಕರಗಿ ವರ ನೀಡುವ ಜಗನ್ಮಾಥೆ ನಮ್ಮ ಮಾಡಾಳು ಸ್ವರ್ಣ ಗೌರಿ
🙏🙏🙏🙏🙏🙏🙏🙏
ಈ ವರ್ಷ 2023ರಲ್ಲಿ
ಅಮ್ಮನವರ ಪ್ರತಿಷ್ಠಾಪನೆ ದಿನಾಂಕ 18-09-2023 ಮದ್ಯಾಹ್ನ 12:30
ಚಂದ್ರಮಂಡಲ ದುಗ್ಗಲಸೇವೆ ದಿನಾಂಕ 27-09-2023 ಬೆಳಗಿನ ಜಾವ 4 ಗಂಟೆಗೆ
ತಾಯಿಯವರ ವಿಸರ್ಜನೆ ದಿನಾಂಕ 27-09-2023 ರ ಬುದವಾರ ಸಂಜೆ 4 ರಿಂದ 5 ಗಂಟೆ
ಹತ್ತಿರದ ಪ್ರಮುಖ ಸ್ಥಳ 🙏ಶ್ರೀ ಬಿಳಿಗಿರಿ ರಂಗನಾಥ ದೇವಸ್ಥಾನ ಬೆಲಗೂರು ಶ್ರೀ ಆಂಜನೇಯ ಸ್ವಾಮಿಯವರ ಸನ್ನಿದಿ ಶ್ರೀಜೇನ್ ಕಲ್ ಸಿದ್ದೇಶ್ವರ ಬೆಟ್ಟ ಶ್ರೀ ಸಿದ್ದೇಶ್ವರ ತಪೋಭೂಮಿ ರಾಮನಹಳ್ಳಿ ಜೆ.ಸಿ ಪುರ. ಚಿಕ್ಕತಿರುಪತಿ ಅರಸೀಕೆರೆ.
ಮಾರ್ಗ :ತಿಪಟೂರು- ಹೊನ್ನವಳ್ಳಿ- ಜೆ.ಸಿ ಪುರ -ಮಾಡಾಳು
ಅರಸೀಕೆರೆ- ಜೆ.ಸಿ ಪುರ- ಮಾಡಾಳು
🙏🙏🙏(ಸಂಗ್ರಹ) ಸಿದ್ದೇಶ್ ಕೂರ್ಗಿ
Comments