ಬಿಎಸ್_ಯಡಿಯೂರಪ್ಪ
ರಾತ್ರೋ ರಾತ್ರಿ ನಾಯಕನದವರಲ್ಲ ನಮ್ಮ ಯಯ ಶ್ರೀ
#ಬಿಎಸ್_ಯಡಿಯೂರಪ್ಪ ವ್ಯಕ್ತಿ ಚಿತ್ರಣ
ಮoಡ್ಯ ಜಿಲ್ಲೆ ಕೆ. ಆರ್ .ಪೇಟೆ ತಾಲ್ಲೂಕಿನ ಬುಕನಕೆರೆಯಲ್ಲಿ
ಶ್ರೀ #ಸಿದ್ದಲಿಂಗಪ್ಪ, ಶ್ರೀಮತಿ #ಪುಟ್ಟತಾಯಮ್ಮ
ಅವರ ಮಗನಾಗಿ
#1943 ಫೆಬ್ರುವರಿ 27 ರಂದು ಜನನ..
1965 ರಲ್ಲಿ ಬೆಂಗಳೂರಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಾಗಿ ಸಾರ್ವಜನಿಕ ಜೀವನಕ್ಕೆ ಪಾದಾರ್ಪಣೆ
ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರ ಜೊತೆ ಸಂಪರ್ಕಕ್ಕೆ ಬಂದಿದ್ದು, ಇವರ ಹೋರಾಟದ ಕೆಚ್ಚು, ನಿಷ್ಠೆ, ಸಮಾಜಮುಖಿ ಬದುಕಿಗೆ ನಾಂದಿಯಾಯಿತು.
ಕಾರ್ಯಕ್ಷೇತ್ರವಾಗಿ #ಶಿಕಾರಿಪುರವನ್ನು ಆರಿಸಿಕೊಂಡ
ಶ್ರೀ ಯಡಿಯೂರಪ್ಪನವರು ಶಿಕಾರಿಪುರದ ದಿII ವೀರಭದ್ರಶಾಸ್ತ್ರಿ ಅವರ ಪುತ್ರಿ #ಮೈತ್ರಾದೇವಿಯೊಂದಿಗೆ ವಿವಾಹ. ( ಮಾರ್ಚ್ 5th 1967)
1972 ರಲ್ಲಿ ಶಿಕಾರಿಪುರ ತಾಲ್ಲೂಕಿನ ಜನ ಸಂಘದ ಅಧ್ಯಕ್ಷರಾಗಿ ಸಕ್ರಿಯ ರಾಜಕಾರಣ ಪ್ರವೇಶ.
1975 ರಲ್ಲಿ ಶಿಕಾರಿಪುರ ಪುರಸಭಾ ಸದಸ್ಯರಾಗಿ,
ಮಾರ್ಚ್ 1977 ರಿಂದ ಫೆಬ್ರವರಿ 1981ರವರೆಗೆ ಶಿಕಾರಿಪುರ ಪುರಸಭಾ ಅಧ್ಯಕ್ಷರಾಗಿ, ಶಿಕಾರಿಪುರದ ನೀರು, ವಿದ್ಯುತ್, ರಸ್ತೆ, ಸ್ವಚ್ಚತೆ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ನಿರಂತರ ಹೋರಾಟ. ಅಧಿಕಾರ ಸಿಕ್ಕಾಗ ಶಿಕಾರಿಪುರ ನಗರದ ಚಿತ್ರಣವನ್ನೇ ಬದಲಾಯಿಸಿದ ಕೀರ್ತಿ. ಬಡವರ ಬದುಕಿಗೆ ಸ್ಪಂದಿಸುವ ಸದಾ ಕ್ರೀಯಾಶೀಲರಾಗಿರುವ ರಾಜಕಾರಣಿ ಎಂಬ ಹೆಗ್ಗಳಿಕೆ. ಕುಮುದ್ವತಿ ನೀರನ್ನು ಮನೆ ಮನೆಗೆ ತಲುಪಿಸುವ ಸಂಕಲ್ಪ ತೊಟ್ಟು, ಅದರಲ್ಲಿ ಯಶಸ್ಸುಗಳಿಕೆ.
1983ರಲ್ಲಿ ಪ್ರಥಮ ಬಾರಿಗೆ ಕರ್ನಾಟಕದ ವಿಧಾನಸಭೆಗೆ ಭಾರಿ ಬಹುಮತದಿಂದ ಪ್ರವೇಶ. ಶಿವಮೊಗ್ಗದಲ್ಲಿ ರೈತರ ಸಾಲಮನ್ನ ಮಾಡಲು ಒತ್ತಾಯ. ಹೋರಾಟದ ಪ್ರತಿಫಲ – ರೈ ತರ ಸಾಲಮನ್ನಾ.
ತುರ್ತುಪರಿಸ್ಥಿತಿಯ ವಿರುದ್ಧ ಕೆಚ್ಚೆದೆಯ ಹೋರಾಟ. ಭೂಗತರಾಗಿದ್ದುಕೊಂಡೇ ಜನ ಸಂಘಟನೆಯಲ್ಲಿ ತೊಡಗಿ, ಸಾಗರ ಮತ್ತು ಬಳ್ಳಾರಿಯಲ್ಲಿ ಜೈಲುವಾಸ. ಜೈಲಿನಲ್ಲಿದ್ದುಕೊಂಡು ಖೈದಿಗಳಿಗಾಗುತ್ತಿದ್ದ ಅನ್ಯಾಯದ ವಿರುದ್ಧ ಹೋರಾಟ. ಹೋರಾಟದ ವಿಶೇಷತೆ-ಖೈದಿಗಳಿಗೆ ನ್ಯಾಯ ದೊರೆತದ್ದು.
ಶಿಕಾರಿಪುರದ ಕ್ಷೇತ್ರದಿಂದ ಐದು ಬಾರಿ ವಿಧಾನಸಭೆಗೆ ಆಯ್ಕೆ. ಐದು ಬಾರಿ ವಿಧಾನಪರಿಷತ್ತಿಗೆ ಆಯ್ಕೆ. 1996ರಲ್ಲಿ ಮತ್ತು 2004ರಲ್ಲಿ ವಿಧಾನಸಭೆ ವಿರೋಧಪಕ್ಷದ ನಾಯಕರಾಗಿ ಪ್ರಭಾವಿ ಹೋರಾಟ. 2006ರಲ್ಲಿ ಉಪಮುಖ್ಯಮಂತ್ರಿ (ಖಾತೆ-ಹಣಕಾಸು ಹಾಗೂ ಸಣ್ಣ ನೀರಾವರಿ ಇಲಾಖೆ).
1988 ರಿಂದ 1991, 1995 ರಿಂದ 2000ದವರೆಗೆ 9 ವರ್ಷಗಳ ಕಾಲ ಭಾರತೀಯ ಜನತಾ ಪಾರ್ಟಿಯ ಅಧ್ಯಕ್ಷರಾಗಿ ಪಕ್ಷದ ಸರ್ವತೋಮುಖ ಬೆಳವಣಿಗೆಗೆ ಕಾರಣಕರ್ತರು. ಬಿಜೆಪಿ ಕೇವಲ ನಗರ ಜನತೆಯ ಪಾರ್ಟಿ ಎನ್ನುತ್ತಿದ್ದವರಿಗೆ, ಬಿಜೆಪಿ ರೈತರ ಪಾರ್ಟಿ, ದೀನದಲಿತರ ಪಾರ್ಟಿ, ಕೃಷಿಕೂಲಿಕಾರ್ಮಿಕರ ಪಾರ್ಟಿ ಎನ್ನುವಂತೆ ಮಾಡಿದ ಕೀರ್ತಿ.
1991ರಲ್ಲಿ ಕಾಶ್ಮೀರದಲ್ಲಿ ಭಯೋತ್ಪಾದಕರು ರಾಷ್ಟ್ರಧ್ವಜ ಹಾರಿಸಲು ಸವಾಲೋಡ್ಡಿದಾಗ ಡಾ.ಮುರಳಿ ಮನೋಹರ ಜೋಷಿ ನೇತೃತ್ವದಲ್ಲಿ ಶ್ರೀನಗರದ ಲಾಲ್ ಚೌಕದಲ್ಲಿ ರಾಷ್ಟ್ರಧ್ವಜರೋಹಣ. ಕರ್ನಾಟಕದ ಹುಬ್ಬಳಿಯ ಕಿತ್ತೂರುರಾಣಿ ಚೆನ್ನಮ್ಮ ಮೈದಾನದಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನವಾದಾಗ ಆ ಜಾಗದಲ್ಲಿ ರಾಷ್ಟ್ರಧ್ವಜ ಹಾರಿಸಲು ಶಪಥ.
ಜನಜಾಗೃತಿ ಮೂಡಿಸಲು ರಾಜ್ಯ ಪ್ರವಾಸ. ಸತತ ನಾಲ್ಕು ವರ್ಷಗಳವರೆಗೆ ರಾಷ್ಟ್ರೀಯ ಹಬ್ಬಗಳೆಂದು (ಸ್ವಾತಂತ್ರ ದಿನಾಚಾರಣೆ ಮತ್ತು ಗಣರಾಜೋತ್ಸವ ) ರಾಷ್ಟ್ರಧ್ವಜ ಹಾರಿಸಲು ಕಾರಣಕರ್ತ.
ಜೀತಮುಕ್ತರ ಪರಿಹಾರಕಕ್ಕಾಗಿ ಶಿಕಾರಿಪುರ ಬಿಡಿಎ ಕಚೇರಿ ಮುಂದೆ ಐದು ತಿಂಗಳ ಕಾಲ ನಿರಂತರ ಹಗಲು/ರಾತ್ರಿ ಧರಣಿ. ಸರ್ಕಾರ ಸ್ಪಂದಿಸದ ಕಾರಣ ಶಿವಮೊಗ್ಗಕ್ಕೆ ಸಾವಿರಾರು ರೈತರೊಂದಿಗೆ ಪಾದ ಯಾತ್ರೆ. ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ. ಸರ್ಕಾರ ಮಣಿದು ಜೀತಮುಕ್ತರಿಗೆ ಎಲ್ಲಾ ಸೌಲಭ್ಯಗಳನ್ನು ನೀಡಲು ಮುಂದಾಗಿದ್ದು ದಾಖಲೆ. ಹೋರಾಟಕ್ಕೆ ಶ್ರೀ ಅಟಲ್ ಬಿಹಾರಿ ವಾಜಪಾಯಿಯ ವರಿಂದ ಮುಕ್ತ ಶ್ಲಾಘನೆ, ಶುಭಾಶಯ. ಶ್ರೀ ಗುಂಡುರಾಯರ ಅಧಿಕಾರ ಅವಧಿಯಲ್ಲಿ ಕೂಲಿಗಾಗಿ ಕಾಳು ಯೋಜನೆ ದುರುಪಯೋಗದ ವಿರುದ್ಧ ತೀವ್ರ ಪ್ರತಿಭಟನೆ. ಸಿ ಮತ್ತು ಡಿ ವರ್ಗದ ಜಮೀನನ್ನು ರೈತರಿಂದ ಅರಣ್ಯ ಇಲಾಖೆಗೆ ವರ್ಗಾಯಿಸಲು ಮುಂದಾದಾಗ ರೈತರ ಪರ ಟೊಂಕ ಕಟ್ಟಿನಿಂತ ಧೀಮಂತ. ಜಾಥಾ, ಚಳುವಳಿ, ಧರಣಿ ಮೂಲಕ ಪ್ರತಿಭಟನೆ. 1988ರಲ್ಲಿ ವಿಧಾನಸಭೆಯಲ್ಲಿ ವಿಧೇಯಕ ಮಂಡನೆ ವಿರೋಧಿಸಿ ತೀವ್ರ ಏಕಾಂಗಿ ಹೋರಾಟ. ಪ್ರತಿಭಟನೆ, ಧರಣಿ, ಆಕ್ರೋಶಗಳಿಗೆ ಮಣಿಯದ ಸರ್ಕಾರ. ಸದನದಲ್ಲೇ ರೈತರ ಪರ ಕಣ್ಣಿರು ಸುರಿಸಿದ ನೇಗಿಲಯೋಗಿ, ಸರ್ಕಾರದ ಕಣ್ಣು ತೆರೆಸಿ, ವಿಧೇಯಕ ವಾಪಸು. ಅರಣ್ಯ ಸಚಿವಾರದ ಶ್ರೀ ಬಿ.ರಾಚಯ್ಯನ ವರಿಂದ ಪ್ರಶಂಸೆ ಏಕಾಂಗಿ ವೀರನ ಸಾಹಸಗಾಥೆಯಿಂದ ಇಡೀ ನಾಡಿಗೆ ಅಚ್ಚರಿ. ರೈತರಿಂದ ಸಂಭ್ರಮ. ರೈತ ನಾಯಕ ಯಡಿಯೂರಪ್ಪ ಎಂಬ ಪ್ರಶಂಸೆ. ವಿಧಾನಮಂಡಲದ ಇತಿಹಾಸದಲ್ಲಿ ಸರ್ಕಾರ ವಿಧೇಯಕ ವಾಪಸು ಪಡೆದ ದಾಖಲೆ ನಿರ್ಮಾಣ.
1974ರಲ್ಲಿ ಗ್ರಾಮ ರಾಜ್ಯ ಉಳಿಸಿ ರೈತರನ್ನು ರಕ್ಷಿಸಿ ಎಂಬ ಘೋಷಣೆಯೊಂದಿಗೆ ಶಿವಮೊಗ್ಗದಿಂದ ಬೆಂಗಳೂರಿಗೆ ಸಾವಿರಾರು ರೈತರೊಂದಿಗೆ ಪಾದಯಾತ್ರೆ. ವಿಧಾನಸೌಧಕ್ಕೆ ಮುತ್ತಿಗೆ. ಪಂಚಾಯತ್ ಚುನಾವಣಾ ನಡೆಸಲು ಒತ್ತಾಯ. ಬಿಜೆಪಿ ನಾಯಕ ಶ್ರೀ ಲಾಲ್ ಕೃಷ್ಣ ಅಡ್ವಾಣಿಯವರಿಂದ ರೈತನಾಯಕ ಯಡಿಯೂರಪ್ಪನವರಿಗೆ ಶುಭಾಶಯ.
1988ರಲ್ಲಿ ರೈತರ ಸಮಸ್ಯೆಗಳನ್ನು ತೆಗೆದುಕೊಂಡು ಬಸವನ ಬಾಗೇವಾಡಿಯಿಂದ ಬೆಂಗಳೂರಿಗೆ ರೈತ ಜಾಥಾ. ರಾಜ್ಯದಾದ್ಯಂತ ಸಾವಿರಕ್ಕೂ ಹೆಚ್ಚು ಸಾರ್ವಜನಿಕ ಸಭೆಗಳಲ್ಲಿ ಭಾಷಣ.
ಬಸವಕಲ್ಯಾಣದಿಂದ ರೈತ ಜಾಗೃತಿಯನ್ನು ಮೂಡಿಸಲು ಇನ್ನೊಂದು ಬಾರಿ ರೈತ ಜಾಥಾ. ಲಕ್ಷಾಂತರ ರೈತರ ಪಾಲ್ಗೊಳ್ಳುವಿಕೆಯಿಂದ ಐದು ಐತಿಹಾಸಿಕ ದಾಖಲೆ. ಮೂರನೇ ಬಾರಿಗೆ ಬನವಾಸಿಯಿಂದ ಬೆಂಗಳೂರಿಗೆ ರೈತ ಜಾಥಾ. ಕೃಷ್ಣರಾಜಸಾಗರಕ್ಕೆ ಮತ್ತೊಂದು ಬಾರಿ ರೈತ ಜಾಥಾ. ಹೀಗೆ ರೈತ ಜಾಥದಲ್ಲಿ ರೈತರನ್ನು ಜಾಗೃತಗೊಳಿಸಿ, ಬಡಿದೆಬ್ಬಿಸಿ, ವಿಶ್ವಾಸ ಮೂಡಿಸಿದ ಕೀರ್ತಿ. ಅದರಂತೆ ಬಿಜೆಪಿ ರೈತರ, ದೀನದಲಿತರ ಪಾರ್ಟಿ ಎಂಬುದನ್ನು ನಾಡಿನ ಜನತೆಗೆ ಮನವರಿಕೆ ಮಾಡಿಕೊಟ್ಟಿರುವ ಕೀರ್ತಿ.
1998ರಲ್ಲಿ ಕಾವೇರಿ ಸಮಸ್ಯೆ ಮತ್ತೆ ಉಲ್ಬಣ. ಕಾವೇರಿ ಹುಟ್ಟೂರಿನಲ್ಲಿ ನೀರಿಗಾಗಿ ರೈತರ ಪರದಾಟ. ಸಾವಿರಾರು ರೈತರೊಂದಿಗೆ ತಲಕಾವೇರಿಯಿಂದ ಕೃಷ್ಣರಾಜಸಾಗರದವರೆಗೆ ರೈತಜಾಥಾ. ಸರ್ಕಾರದ ಗಮನ ಸೆಳೆತ.
1999ರಲ್ಲಿ ಪಕ್ಷದ ಸಂಘಟನೆಗಾಗಿ, ಜನಜಾಗೃತಿಗಾಗಿ ಐತಿಹಾಸಿಕ ಸಂಕಲ್ಪಯಾತ್ರೆ. ಒಂದೂವರೆ ತಿಂಗಳ ಕಾಲ ನಿರಂತರ ಪ್ರವಾಸ. ಹಳ್ಳಿ ಹಳ್ಳಿಗಳಲ್ಲಿ ಭವ್ಯ ಸ್ವಾಗತ. ಬಿಜೆಪಿ ಪರ್ಯಾಯ ಪಕ್ಷವೆಂಬ ಉದ್ಘಾರ. ಶ್ರೀ ಅಟಲ್ ಬಿಹಾರಿ ವಾಜಪೇಯಿಯವರಿಂದ ಶ್ಲಾಘನೆ, ಆಲಿಂಗನ. ಇದರಿಂದಾಗಿ ಬಿಜೆಪಿಯಿಂದ 1999 ರಲ್ಲಿ 44 ಶಾಸಕರು ವಿಧಾನಸಭೆಗೆ.
2002 ರಲ್ಲಿ ಬಗರ್ ಹುಕುಂ ಸಾಗುವಳಿ ಮಾಡುತ್ತಿದ್ದ ರೈತರನ್ನು ಸರ್ಕಾರ ದಕ್ಕಲೆಬ್ಬಿಸಲು ಮುಂದಾದಾಗ ಬಗರ್ ಹುಕುಂ ಸಾಗುವಾಲಿದಾರರ ಪರವಾಗಿ ಶಿಕಾರಿಪುರದಿಂದ ಶಿವಮೊಗ್ಗಕ್ಕೆ ಪಾದಯಾತ್ರೆ. ಶಿವಮೊಗ್ಗದಲ್ಲಿಂದು ವಾರಕಾಲ ಹಗಲು/ ರಾತ್ರಿ ಧರಣಿ. ಸರ್ಕಾರದ ಕಣ್ಣು ತೆರೆಸಿದ ಕೀರ್ತಿ.
2002ರಲ್ಲಿ ಮೆಕ್ಕೆಜೋಳ ಬೆಂಬಲ ಬೆಲೆ ನೀಡಲು ಆಗ್ರಹಿಸಿ ಸಾವಿರಾರು ರೈತರೊಂದಿಗೆ ಶಿಕಾರಿಪುರ ಮತ್ತು ಶಿವಮೊಗ್ಗದ ಎಪಿಎಂಸಿ ಎದುರು ಧರಣಿ. ಹೋರಾಟದ ಪ್ರತೀಕವಾಗಿ ಸರ್ಕಾರದಿಂದ ಜೋಳ ಖರೀದಿ.
ಬೆಂಗಳೂರಿನಲ್ಲಿ ನಿರಂತರ 9 ದಿನಗಳ ಕಾಲ ಹಗಲು/ರಾತ್ರಿ ಧರಣಿ. ರೈತರಿಗೆ ನಿರಂತರ ವಿದ್ಯುತ್ ಪೂರೈಕೆಗೆ ಆಗ್ರಹ.
2002 ಮತ್ತು 2004 ಆಗಷ್ಟ್ ನಲ್ಲಿ ಬೆಂಗಳೂರಿನಲ್ಲಿ ರೈತರ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹ. ಸಿಇಟಿ ಗೊಂದಲ ನಿವಾರಣೆಗೆ ಆಗ್ರಹ, ನಕಲಿ ಛಾಪಾ ಕಾಗದ ಹಗರಣದ ತನಿಖೆಗೆ ಆಗ್ರಹ, ಹಗಲು/ರಾತ್ರಿ ಧರಣಿ.
ಶಿಕಾರಿಪುರ ಬಳಿಯ ಅಂಜನಾಪುರ ಜಲಾಶಯ ತನ್ನ ವಿನೂತನ ವಿನ್ಯಾಸದಿಂದಾಗಿ ಇಡೀ ಎಷ್ಯಾದಲ್ಲಿ ಹೆಸರುವಾಸಿ. ಈ ಜಲಾಶಯ ನಿರ್ಮಾಣದಿಂದಾಗಿ ಸಾವಿರಾರು ಎಕರೆ ಪ್ರದೇಶಕ್ಕೆ ನೀರುಣಿಸಿ ಜಲದಾಟ ಎಂಬ ಬಿರುದಿಗೆ ಪಾತ್ರ.
ಕಾವೇರಿ ಹೋರಾಟದಿಂದ ರಾಮಜನ್ಮಭೂಮಿ ಹೋರಾಟದವರೆಗೆ, ಜೀತಮುಕ್ತರ ಸಮಸ್ಯೆಯಿಂದ ಬಗರ್ ಹುಕಂ ಸಮಸ್ಯೆವರೆಗೆ ನಿರಂತರ ಹೋರಾಟ, ಜನಪರ ಕಾಳಜಿ ಹೊಂದಿದ ಧಿರೋದ್ದಾತ. ದಿನ ಪ್ರತಿ ಬೆಳಿಗ್ಗೆ ದೇವರ ಪೂಜೆ ಮಾಡದಿದ್ದರು ಪರವಾಗಿಲ್ಲ, ದೀನದಲಿತರ ಸೇವೆಯಿಂದ ಪುಜೆಗೈಯಲು ಕಾರ್ಯಕರ್ತರಿಗೆ ಕಿವಿಮಾತು ಹೇಳಿದ ಧರ್ಮದಾಟ.
ಜೀವಬೇದರಿಕೆಗೆ ಬಗ್ಗದೆ ಆರ್ಥಿಕ ವ್ಯವಸ್ಥೆಯನ್ನು ಬುಡಮೇಲು ಮಾಡಿದ ಭೂಗತ ದೊರೆ ದಾವುದ್ ಇಬ್ರಾಹಿಂನೊಂದಿಗೆ ಶಾಮೀಲಾಗಿದ್ದ ನಕಲಿ ಛಾಪಾ ಕಾಗದ ಹಗರಣದ ರೂವಾರಿ ಕರೀಂಲಾಲಾ ತೆಲಗಿ ಮತ್ತು ಆತನ ಸಹಚರರ ವಿವರಗಳನ್ನು ಬಯಲು ಮಾಡಿ, ಸದನದ ಒಳಗೆ ಮತ್ತು ಹೊರಗೆ ಹೋರಾಟಮಾಡಿ, ಅವರ ಬಂಧನಕ್ಕೆ ಕಾರಣಕರ್ತ.
ಕೂಲಿಗಾಗಿ ಕಾಲು ಯೋಜನೆ ದುರುಪಯೋಗ ಆದಾಗ ಜನತಾ ಅದಾಲತ್ ಕಾರ್ಯಕ್ರಮವನ್ನು ರೂಪಿಸಿ ಬರಗಾಲ ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ ಈ ಭ್ರಷ್ಟಚಾರದ ಹಗರಣವನ್ನು ಬಯಲು ಮಾಡಿದ ಕೀರ್ತಿ.
ಕಾವೇರಿ ತಟದ ಬೂಕನಕೆರೆಯಲ್ಲಿ ಹುಟ್ಟಿ, ಆರ್.ಎಸ್.ಎಸ್ . ಆಶ್ರಯದಲ್ಲಿ ಪಳಗಿ, ನಾಡಿನ ರೈತ, ಧೀನದಲಿತರ ನಾಯಕನಾಗಿ ಬೆಳೆದ ಧನಿವರಿಯದ ಹೋರಾಟಗಾರ.
ರಾಜ್ಯ ಕಂಡ ಈ ಅಪರೂಪದ ರಾಜಕಾರಣಿ, ರೈತನಾಯಕ, ಧೀನದಲಿತರ ಧುರೀಣರ ಯಶೋಗಾಥೇ ಹೀಗೆ ಮುಂದುವರಿಯಲಿ. ಶೋಪಿತರ ಪರ ಇನ್ನಷ್ಟು ಹೋರಾಟ, ಸಂಘಟಿಸುವ ಕನಸನ್ನು ಆ ಭಗವಂತ ಅವರಿಗೆ ನೀಡಲೆಂದು ನಾಡಿನ ಜನತೆಯ ಆಶಯ.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಬುಕನಕೆರೆಯಲ್ಲಿ ಹುಟ್ಟಿ, ಶಿವಮೊಗ್ಗ ಜೆಲ್ಲೆಯ ಶಿಕಾರಿಪುರವನ್ನು ಕರ್ಮಭೂಮಿಯಗಿಸಿಕೊಂಡು ಶ್ರೀ. ಬಿ.ಎಸ್. ಯಡಿಯೂರಪ್ಪನವರು ಮಾಡಿದ ಸಾಧನೆಗಳ ಸವಾರಿ-ಬೆಳೆದು ಬಂದ ದಾರಿ:
1965 : ಅರ್.ಎಸ್ ಎಸ್ .ನ ಸಾಮಾನ್ಯ ಕಾರ್ಯಕರ್ತ
1970-72 : ಶಿಕಾರಿಪುರ ತಾಲ್ಲೂಕು ಕಾರ್ಯವಾಹಕ
1972 : ಜನಸಂಘದ ತಾಲ್ಲೂಕಿನ ಅಧ್ಯಕ್ಷ
1975: ಶಿಕಾರಿಪುರ ಪುರಸಭೆ ಸದಸ್ಯ
1977 : ಜನತಾಪಕ್ಷದ ತಾಲ್ಲೂಕಿನ ಕಾರ್ಯದರ್ಶಿ
1977-1981: ಶಿಕಾರಿಪುರ ಪುರಸಭೆಯ ಅಧ್ಯಕ್ಷ
1980: ಬಿಜೆಪಿಯ ತಾಲ್ಲೂಕು ಅಧ್ಯಕ್ಷ
1983: ಮೊದಲಬಾರಿ ಶಾಸಕರಾಗಿ ಆಯ್ಕೆ, ಮುಂದೆ ಐದು ಬಾರಿ ಶಿಕಾರಿಪುರ ಕ್ಷೇತ್ರದ ಶಾಸಕ
1985: ಬಿಜೆಪಿಯ ಶಿವಮೊಗ್ಗ ಜಿಲ್ಲಾಧ್ಯಕ್ಷ
1988-91: ಬಿಜೆಪಿಯ ರಾಜ್ಯಾಧ್ಯಕ್ಷ
1992: ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ
1994: ಕರ್ನಾಟಕ ವಿಧಾನಸಭೆಯ ವಿರೋಧಪಕ್ಷದ ನಾಯಕ
1995-2000: ಬಿಜೆಪಿಯ ಪ್ರಚಾರ ಸಮಿತಿ ಅಧ್ಯಕ್ಷ
2004: ಕರ್ನಾಟಕ ವಿಧಾನಸಭೆಯ ವಿರೋಧಪಕ್ಷದ ನಾಯಕ
2006: ಉಪಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರು
2006-2007: 2006-2007 ನೇ ಸಾಲಿನಲ್ಲಿ ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಹಣಕಾಸು ಮತ್ತು ಸಣ್ಣ ನೀರಾವರಿ ಸಚಿವರಾಗಿ ಎರಡು ಅತ್ಯುತಮ ಅಭಿವೃದ್ದಿ ಪರ ಮತ್ತು ಜನಕಲ್ಯಾಣ ಕೇಂದ್ರಿತ ಬಜೆಟ್ ಗಳನ್ನೂ ಮಂಡಿಸಿದ ಕೀರ್ತಿ.
ಪ್ರಮುಖ ಸಾಧನೆಗಳು:
ರೈತರ ಸಾಲ ಮನ್ನಾ, ಸಾರಾಯಿ ನೀಷೇಧ. ಲಾಟರಿ ನೀಷೇಧ, ರೈತರಿಗೆ ಶೇ .4 ಬಡ್ಡಿದರದಲ್ಲಿ ಸಾಲ, ಬಿಪಿಎಲ್ ಕುಟುಂಬಗಳ ಹೆಣ್ಣುಮಕ್ಕಳ ಸಬಲೀಕರಣಕ್ಕೆ ಭಾಗ್ಯಲಕ್ಷ್ಮಿ ಯೋಜನೆ, ಉಚಿತ ಬೈಸಿಕಲ್ ವಿತರಣೆ ಯೋಜನೆ, ನಿರುದ್ಯೋಗ ನಿವಾರಣೆಗೆ ಸುವರ್ಣ ಕಾಯಕ ಉದ್ಯೋಗ ತರಭೇತಿ ಯೋಜನೆ, ಹಿರಿಯ ನಾಗರಿಕರ ಸಾಮಾಜಿಕ ಭದ್ರೆತೆಗೆ ಸಂಧ್ಯಾ ಸುರಕ್ಷಾ ಯೋಜನೆ, ಮೊದಲಾದ ಕ್ರಾಂತಿಕಾರಿ ಕಾರ್ಯಕ್ರಮಗಳನ್ನು ಬಜೆಟ್ ನಲ್ಲಿ ಅಳವಡಿಸಿ ಅನುಷ್ಠಾನಗೊಳಿಸಿದ ಹೆಗ್ಗಳಿಕೆ.
12.11.2007 ರಂದು ಸೋಮವಾರ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ. ದಕ್ಷಿಣ ಭಾರತದ ಮೊದಲ ಬಿಜೆಪಿ ನೇತೃತ್ವದ ಸರ್ಕಾರ ಚಾಲನೆಗೊಳಿಸಿದ ಹೆಮ್ಮೆ.
30-05-2008 ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ.
ಕಠಿಣ ದುಡಿಮೆ – ಸದಾ ಸಂಚಾರ ಅವರ ಯಶಸ್ಸಿನ ಗುಟ್ಟು.
Facebook collect
Comments