ಕೋವಿಡ್ -೧೯ ಮತ್ತು ಲಾಕ್ ಡೌನ್ ಸಂದರ್ಭದಲ್ಲಿ ಕಾರ್ಮಿಕ ರ ಸಮಸ್ಯೆಗಳು
ಕೋವಿಡ್-೧೯ ಸಂದರ್ಭದಲ್ಲಿ ಲಾಕ್ ಡೌನ್ ಸಾಮನ್ಯವಾದ ಸರ್ಕಾರದ ನಡೆಯಾಗಿದೆ. ಲಾಕ್ ಡೌನ್ ಪೂರ್ಣತಃ, ಭಾಗಶಃ ಲಾಕ್ ಡೌನ್ ಅನ್ನು ಕಾಣಬಹುದಾಗಿದೆ. ಲಾಕ್ ಡೌನ್ ನಿಂದ ಸಮುದಾಯದಲ್ಲಿ ಬಹುಸಂಖ್ಯೆಯಲ್ಲಿ ಜನರಿಗೆ ಕೋವಿಡ್ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಇರುವ ಮಾರ್ಗೋಪಾಯವಾಗಿದೆ. ಕೋವಿಡ್ -೧೯ ನಿಂದ ಗ್ರಾಮ, ಜಿಲ್ಲೆ, ರಾಜ್ಯ, ದೇಶ, ವಿದೇಶ, ಪ್ರಪಂಚ ಎಲ್ಲೆಡೆಯು ತನ್ನ ಕಬಂಧ ಬಾಹುಗಳನ್ನು ಆವರಿಸಿ ಆರ್ಥಿಕ ಅಸಮತೋಲನಕ್ಕೆ ಕಾರಣವಾಗಿದೆ. ಔಷಧಿಯ, ವೈದ್ಯಕೀಯ ವಲಯ ಹಾಗೂ ವೈದ್ಯಕೀಯ ಅವಲಂಭಿತ ಉದ್ಯಮಗಳಿಗೆ ಲಾಭದಾಯಕವಾಗಿದೆ. ಆದರೆ ಲಾಕ್ ಡೌನ್ ನಿಂದ ಜನ ಸಮುದಾಯಕ್ಕೆ ಉದ್ಯಮಗಳಿಗೆ, ವ್ಯವಹಾರಕ್ಕೆ ತೊಂದರೆಯಾಗಿದೆ. ನಗರ ಪ್ರದೇಶದಲ್ಲಿ ಅದೇ ದಿನ ದುಡಿದು ಜೀವಿಸುವ ಕಾರ್ಮಿಕ ವರ್ಗಕ್ಕೆ ತೊಂದರೆಯಾಗಿದೆ.
ಕಾರ್ಮಿಕ ವಲಯದಲ್ಲಿ ಶ್ರೀಮಂತರಿದ್ದಾರೆ, ಬಡವರಿದ್ದಾರೆ. ಕಡು ಬಡವರ ಬಳಿ ವಾಹನಗಳು ಲಭ್ಯವಿರುವುದಿಲ್ಲ, ಮೆಟ್ರೋ, ಕಛೇರಿ, ಸಂಸ್ಥೆ ವಾಹನ, ಬಿ.ಎಂ.ಟಿಸಿ ರೀತಿ ಸರ್ಕಾರಿ ಬಸ್ ವ್ಯವಸ್ಥೆಯನ್ನು ಅವಲಂಭಿಸಿರುತ್ತಾರೆ. ಹಣದ ಅಡಚಣೆಯಿರುತ್ತದೆ. ಒಂದು ತಿಂಗಳ ಬಸ್ ಪಾಸ್ ಅಥವಾ ಮೆಟ್ರೋದಲ್ಲಿ ಸಂಚರಿಸುವ ಮೊತ್ತವನ್ನು ಈ ದಿನ ಒಂದು ದಿನ, ಒಂದು ವಾರದಲ್ಲಿ ಕೆಲಸದ ಸ್ಥಳಕ್ಕೆ ತೆರಳಲು ಸಂದಾಯಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಆಟೋಗಳಿಗೆ ದುಬಾರಿ ದರವನ್ನು ನೀಡಲಾಗದೆ, ಎಷ್ಟೋ ಜನರು ನಡೆದುಕೊಂಡು ಮಲ್ಲೇಶ್ವರಂನಿಂದ ಯಶವಂತಪುರ, ಪೀಣ್ಯದವರೆಗೆ ನಡೆದುಕೊಂಡು ಬಂದು ಹೋಗುತ್ತಿದ್ದಾರೆ. ಉಲ್ಲೇಖಿತ ಪ್ರದೇಶಗಳನ್ನು ಹೊರತು ಪಡಿಸಿಯು ಕಾರ್ಮಿಕರು ಪಾದಚಾರಿಗಳಾಗಿದ್ದಾರೆ.
ವಿಶೇಷವಾಗಿ ಕಾರ್ಯನಿರತ ಕಾರ್ಮಿಕ ಸಮುದಾಯವು ಕೆಲಸ ನಿರ್ವಹಿಸಲು ಅನುಕೂಲ ಮಾಡಿಕೊಡುವುದು ಆಳುವ ಸರ್ಕಾರದ ಕಾರ್ಯವಾಗಿರುತ್ತದೆ. ಕೆಲಸಕ್ಕೆ ತೆರಳುವಾಗ, ಕೆಲಸದಿಂದ ವಾಪಸ್ಸು ಬರುವಾಗ ವಾಹನ ಸೌಕರ್ಯದ ಅವಶ್ಯಕತೆ ತುಂಬ ಇರುತ್ತದೆ. ಇದು ಸಮಯಕ್ಕೆ ಸರಿಯಾಗಿ ಮನೆಗೆ ತೆರಳಲು ಅನುಕೂಲ ಮಾಡಿಕೊಡುವುದರ ಜೊತೆಗೆ ಧೈರ್ಯವನ್ನು ನೀಡುತ್ತದೆ.
ಬಸ್ ಸ್ಟ್ಯಾಂಡ್ ಸಮೀಪ, ರೈಲ್ವೇ ಸ್ಟೇಶನ್ ಬಳಿಯಲ್ಲಿ, ನಿರ್ಜನ ಪ್ರದೇಶಗಳಲ್ಲಿ ಒಂಟಿ ಕಾರ್ಮಿಕರ ಮೇಲೆ ದೌರ್ಜನ್ಯಗಳು ಜರುಗುವ ಸಾಧ್ಯತೆಗಳಿರುತ್ತವೆ. ಅಗತ್ಯ ದೂರಕ್ಕೆ ಅನುಗುಣವಾಗಿ ಪೋಲಿಸ್ ಸಿಬ್ಬಂದಿ ಲಭ್ಯವಿರುವಂತೆ ನೋಡಿಕೊಳ್ಳುವ ಅವಶ್ಯಕತೆ ಇರುತ್ತದೆ.
ಸರ್ಕಾರವು ಬಡ ಮಧ್ಯಮ ಕಾರ್ಮಿಕ ವಲಯವನ್ನು, ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಅಗತ್ಯ ಜೀವನೋಪಾಯಕ್ಕೆ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕಾದ ಅವಶ್ಯಕತೆ ಇದೆ. ನೀಡಲಾದ ಸ್ಕೀಂಗಳ ಸೌಲಭ್ಯ ಪೋಲಾಗದೇ ನಿಗದಿತ ವರ್ಗಕ್ಕೆ ಮುಟ್ಟುತ್ತಿರುವ ಕುರಿತು ಖಾತ್ರಿ ಪಡಿಸಿಕೊಳ್ಳಬೇಕಾದ ಅಗತ್ಯತೆ ಇದೆ.
Comments