Exorcist - Movie
ಬೆಳಿಗ್ಗೆ
ನಾನು ಎದ್ದಾಗ Exorcist ಚಲನಚಿತ್ರ ವೀಕ್ಷಿಸಿದೆ. ಇದು ಮೊದಲಿಗೆ ಭಯವನ್ನು ಕಾತುರತೆಯನ್ನು ಕೌತುಕವನ್ನು
ಹುಟ್ಟಿಸಿತು. ಎಲ್ಲಿಯು ಅನಪೇಕ್ಷಿತ ಎಂಬಂತೆ ಕಂಡುಬರುವ ದೃಶ್ಯಗಳನ್ನು ತುರುಕಲಾಗಿರಲಿಲ್ಲ.
The
child artiste - Linda dennis Blair partrayed the role of possessed by 'puzuzu' fearlessly she commands
accolades. Exorcism ಬರೀ ಭಾರತೀಯ ಪರಂಪರೆಯಲ್ಲಿ ಮಾತ್ರವಲ್ಲಿ ಕ್ರೈಸ್ತ ಧರ್ಮ ಹಾಗೂ ಇತರೆ ಧರ್ಮಗಳಲ್ಲಿಯು
ಇದೆ, ಇತ್ತು ಎನ್ನುವುದನ್ನು ಪ್ರಕಟಪಡಿಸುತ್ತದೆ.
ಕಿರಿಯ
ಪಾದ್ರಿ ವೈದ್ಯನಾಗಿ ಮನೋವೈಜ್ಞನಾಗಿ ವೈದ್ಯಕೀಯ ಪರಿಭಾಷೆಗಳನ್ನು ತಿಳಿಸುವುದು ಆಧುನಿಕ ಚಿಕಿತ್ಸೆಗೆ
ಹಾಗೂ ದೈವತ್ವದ ನಡುವಿನ ಸಮರಸಕ್ಕೆ ಕಾರಣವಾಗುತ್ತದೆ.
ಇದು
ಮನೋವಿಜ್ಞಾನವನ್ನು ಮೀರಿದ ಅತೀಂದ್ರಿಯಶಕ್ತಿಗಳ ಶಕ್ತಿಯ
ಅನಾವರಣವನ್ನು ಮಾಡುತ್ತದೆ. ಆದರೆ 88 ಜನ ವೈದ್ಯರು
ಕೈಚೆಲ್ಲಿದರು ತಾಯಿ ಮಾತ್ರ ತನ್ನ ಮಗಳನ್ನು ಬಿಟ್ಟು ಕೊಡಲು ತಯಾರಿರುವುದಿಲ್ಲ. ಯಾವುದೋ Asylum ಗೆ
ಆಕಲು ತಯಾರಿರುವುದಿಲ್ಲ.
ಮಾತೃತ್ವದ
ತುಡಿತ ಮಗಳ ಪ್ರಾಣವನ್ನು ಉಳಿಸುತ್ತದೆ ಆದರೆ ಉಳಿಸಲು ಪ್ರಯತ್ನಿಸಿದವರ ಪ್ರಾಣ ಹೋಗುವುದು ಕುಹಕವೇ
ಸರಿ.
ಪಾದ್ರಿ ಮೆರ್ರಿನ್ ಹಾಗೂ ಕರ್ರಾಸ್ ರವರು ರೇಗಿನಳನ್ನು ಅತೀಂದ್ರಿಯದಿಂದ ಬಿಡಿಸುವ ಪ್ರಯತ್ನವನ್ನು ಮಾಡುತ್ತಾರೆ. ಪಾದ್ರಿ ಕರ್ರಾಸ್ ಅತೀಂದ್ರಿಯದ ಕುಹಕ, ವಿಕಟತೆಯ ಚಂಚಲತೆಗೆ ಒಳಗಾಗುತ್ತಾರೆ. ಪಾದ್ರಿ ಮೆರ್ರಿನ್ ಒಬ್ಬರೇ, ಪ್ರಯತ್ನಿಸಿದಾಗ ಹೃದಯಾಘಾತದಿಂದ ಸಾವನ್ನಪ್ಪುತ್ತಾರೆ ಪಾದ್ರಿ ಕರ್ರಾಸ್ ರೇಗಿನಳನ್ನು ಉಳಿಸಲು ಅತೀಂದ್ರಿಯವನ್ನು ತನ್ನ ಮೇಲೆ ಆಹ್ವಾನಿಸಿಕೊಳ್ಳುತ್ತಾನೆ ಮತ್ತು ರೇಗಿನಳನ್ನು ಬದುಕಿಸಲು ಸ್ವಯಂಪ್ರಾಣ ತ್ಯಾಗ ಮಾಡುವುದು ವ್ಯಕ್ತಿಯ ಮಹಾತ್ಯಾಗದ ಗುಣವನ್ನು ತೋರಿಸುತ್ತದೆ.
ಈ ಚಲನಚಿತ್ರವು ಅಮೇರಿಕಾದಲ್ಲಿ26, ಡಿಸೆಂಬರ್ 1973 ರಲ್ಲಿ ಬಿಡುಗಡೆಗೊಂಡಿರುತ್ತದೆ.
Comments