No Confidence motion at 6 pm 20.07.2018

           ಭಾರತ ದೇಶದಲ್ಲಿ 15 ವರ್ಷಗಳ ನಂತರ ಲೋಕಸಭೆಯಲ್ಲಿ ಆಡಳಿತ ರೂಡ ಪಕ್ಷದ ವಿರುದ್ದ " No Confidence motion '' ಗೆ ಕರೆಕೊಟ್ಟಿದೆ. No confidence motion ಗೆ ಲೋಕ ಸಭೆಯ ಯಾವುದೇ ಸದಸ್ಯ ಯಾವುದೇ ಕಾರಣವನ್ನು ನೀಡದೇ ಪ್ರಸ್ತುತ  ಇರುವ ಸರ್ಕಾರದ ವಿರುದ್ದ ಅವಿಶ್ವಾಸ ನಿರ್ಣಯಕ್ಕೆ ಲೋಕಸಭಾ ಸಭಾಪತಿಗಳಿಗೆ ಮನವಿ ಸಲ್ಲಿಸಬಹುದಾಗಿದೆ. ಇದು ಕನಿಷ್ಠ 50 ಜನ  ಲೋಕಸಭಾ ಸದಸ್ಯರ ಸಹಕಾರವಿದ್ದಲ್ಲಿ ಲೋಕ ಸಭಾ ಸಭಾಪತಿಗಳು ಮನವಿಯನ್ನು ಸ್ವೀಕರಿಸುತ್ತಾರೆ. ಸರಕಾರವು ಈ ಸಂದರ್ಭದಲ್ಲಿ ಅಸ್ತಿತ್ವವನ್ನು ಬಹುಸಂಖ್ಯೆಯನ್ನು ಪ್ರದರ್ಶಿಸ ಬೇಕು ಇಲ್ಲದಿದ್ದಲ್ಲಿ ರಾಜಿನಾಮೆಯನ್ನು ನೀಡಬೇಕಾಗುತ್ತದೆ. ಸಂವಿಧಾನದ 75 ನೇ ವಿಧಿಯು " The Council of Minister shall be collectively responsible to the house of people"  ಈ ಕುರಿತು ಸ್ಪಷ್ಟೀಕರಣವನ್ನು ನೀಡುತ್ತದೆ.

            ಪ್ರಥಮ ಬಾರಿಗೆ 1963 ನೇ ಇಸವಿಯಲ್ಲಿ No confidence Motion ಗೆ ಕರೆ ನೀಡಲಾಗಿದ್ದಿತು. ಇಲ್ಲಿಯವರೆಗೆ ಒಟ್ಟು 26 ಬಾರಿ ವಿರೋಧ ಪಕ್ಷಗಳು ಕರೆ ನೀಡಿವೆ. ಹಾಗೂ ದಿನಾಂಕ 20.07.2018 ರಂದು ನಡೆಯುವುದು 27 ನೇ ಯದಾಗಿರುತ್ತದೆ. ಶ್ರೀಮತಿ ಇಂದಿರಾಗಾಂಧಿಯವರ ಅಧಿಕಾರವಧಿಯಲ್ಲಿ 15 ಬಾರಿ No confidence Motion ಗೆ ಕರೆ ನೀಡಲಾಗಿರುತ್ತದೆ.

1963 ಶ್ರೀ ಜವಾಹರ ಲಾಲ್ ನೆಹರು ರವರ  ಆಡಳಿತರೂಡ ಸರ್ಕಾರದ ವಿರುದ್ದ 1 ಬಾರಿ - ಶ್ರೀ. ಜೆ.ಬಿ ಕೃಪಾಲಿನಿ
1964 ಶ್ರೀ ಲಾಲ ಬಹದ್ದೂರ ಶಾಸ್ತ್ರಿಯವರ ಆಡಳಿತರೂಡ ಸರ್ಕಾರದ ವಿರುದ್ದ - ಶ್ರೀ.ಎನ್.ಸಿ ಚಟರ್ಜಿ 
1964-75  ಶ್ರೀ ಲಾಲ ಬಹದ್ದೂರ ಶಾಸ್ತ್ರಿಯವರ ಪೂರ್ವ ಪ್ರಧಾನಿ ವಿರುದ್ದ 3 ಬಾರಿ ಹಾಗೂ 
                 ಶ್ರೀಮತಿ. ಇಂದಿರಾಗಾಂದಿಯವರ ಆಡಳಿತರೂಡ ಸರ್ಕಾರದ ವಿರುದ್ದ 12 ಬಾರಿ 
1979   ಶ್ರೀ . ಮೊರಾರ್ಜಿ ದೇಸಾಯಿ ಆಡಳಿತರೂಡ ಸರ್ಕಾರದ ವಿರುದ್ದ 1 ಬಾರಿ - ಬಿ ಚವ್ಹಾಣ
1981-82   ಶ್ರೀಮತಿ ಇಂದಿರಾಗಾಂಧಿಯವರ ಆಡಳಿತರೂಡ ಸರ್ಕಾರದ ವಿರುದ್ದ 2 ಬಾರಿ
1987  ಶ್ರೀ. ರಾಜೀವ ಗಾಂಧಿಯವರ ಆಡಳಿತರೂಡ ಸರ್ಕಾರದ ವಿರುದ್ದ 1 ಬಾರಿ
1993 ಶ್ರೀ ಪಿ.ವಿ ನರಸಿಂಹರಾವರವರ ಆಡಳಿತರೂಡ ಸರ್ಕಾರದ ವಿರುದ್ದ 2 ಬಾರಿ - ಶ್ರೀ. ಜಸ್ವಂತ ಸಿಂಗ್
1999 ಶ್ರೀ ಅಟಲ್ ಬಿಹಾರಿ ವಾಜಪಾಯಿರವರ ಆಡಳಿತರೂಡ ಸರ್ಕಾರದ ವಿರುದ್ದ 1 ಬಾರಿ
2003 ಶ್ರೀ ಅಟಲ್ ಬಿಹಾರಿ ವಾಜಪಾಯಿರವರ ಆಡಳಿತರೂಡ ಸರ್ಕಾರದ ವಿರುದ್ದ 1 ಬಾರಿ
2008 ಶ್ರೀ. ಮನಮೋಹನ ಸಿಂಗ್ ರವರ ಆಡಳಿತಾವಧಿಯಲ್ಲಿ 1 ಬಾರಿ ವಿಶ್ವಾಸ ಮತ ಯಾಚನೆ.

No Confidence Motion ಅನ್ನು ತೆಲುಗು ದೇಶಂ ಪಕ್ಷದ ಶ್ರೀ.ಶ್ರೀನಿವಾಸ ಕೇಸಿನೇನಿ/ ಶ್ರೀ ತೋಟ ನರಸಿಂಹ ರವರು ಹಾಗೂ ವೈ.ಎಸ್.ಆರ್ ಕಾಂಗ್ರೆಸ್ ನ ಶ್ರೀ. ವೈ.ವಿ ಸುಬ್ಬರೆಡ್ಡಿರವರ ಮಂಡಿಸಿರುತ್ತಾರೆ. No Confidence Motion ಗೆಲ್ಲಲು ಶ್ರೀ ನರೇಂದ್ರ ಮೋದಿಯವರಿಗೆ 249 ವೋಟುಗಳ ಅವಶ್ಯಕತೆ ಇರುತ್ತದೆ.  ಭಾರತೀಯ ಜನತಾ ಪಕ್ಷವು ಪ್ರಸ್ತುತ ಸರ್ಕಾರದಲ್ಲಿ 274 ಸೀಟುಗಳನ್ನು ಹೊಂದಿರುತ್ತದೆ  ಮತ್ತು ಒಟ್ಟು 315 ಸಂಸತ್ ಸದಸ್ಯರ ಬೆಂಬಲವಿರುತ್ತದೆ.

ಶ್ರೀ. ನರೇಂದ್ರ ಮೋದಿ,  ಪ್ರಧಾನ ಮಂತ್ರಿಗಳು, ಭಾರತ ಸರ್ಕಾರ 325 ಲೋಕಸಭಾ ಸದಸ್ಯರ ಬೆಂಬಲದೊಂದಿಗೆ "Trust Vote" ಗೆದ್ದಿರುತ್ತಾರೆ.126 ಲೋಕ ಸಭಾ ಸದಸ್ಯರು No Confidence Motion  ಪರವಾಗಿರುತ್ತಾರೆ.

Comments

Popular posts from this blog

ವೀರಶೈವ ಪಂಚ ಪೀಠಗಳು

ಶ್ರೀ ಮ.ನಿ.ಪ್ರ ವಿರೂಪಾಕ್ಷ ಮಹಾಸ್ವಾಮಿಗಳು,ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಮಠ, ಜಂಗಮ ಕ್ಷೇತ್ರ, ತಿಪ್ಪಾಯಿಕೊಪ್ಪ ಕಿರು ಪರಿಚಯ

Sri Jagadguru 1008 Ujjaini Shrigalu @ Abbe tumkur fair - veerashaiva