ಪದವಿ ಧರ ಕ್ಷೇತ್ರದ ಚುನಾವಣೆ
ದಿನಾಂಕ:08/06/2018 ರಂದು ಜಿಲ್ಲಾ ಮಟ್ಟದ ಆರೋಗ್ಯ ಕರ್ನಾಟಕ ಸಭೆಯನ್ನು ಮುಗಿಸಿಕೊಂಡು ಊರಿಗೆ ತೆರಳಿದೆ. ಇದೇ ದಿನ ಪದವಿ ಧರ ಕ್ಷೇತ್ರದ ಚುನಾವಣೆ ಇತ್ತು. ಸಂಜೆ 5ರೊಳಗೆ ತೆರಳಬೇಕಾದ ಅವಶ್ಯಕತೆ ಇತ್ತು. ರೂ500 ಅನ್ನು ಹೆಚ್ಚುವರಿಯಾಗಿ ಪಾವತಿಸಿ ಹೊನ್ನಾಳಿ ತಲುಪಿದೆ. ಜಿಟಿ - ಜಿಟಿ ಮಳೆ. ಶಿವಮೊಗ್ಗ ತೆರಳುವ ಬಸ್ ಬಂದಿತು. ನನ್ನ ಗಮನವೆಲ್ಲ ಕೈ - ಗಡಿಯಾರದ ಮೇಲೆಯೇ ನೆಟ್ಟಿತ್ತು. ಶಿವಮೊಗ್ಗ ಇಳಿದ ಕೂಡಲೇ ತರೀಕೆರೆ ಗೆ ತೆರಳುವ ಬಸ್ ಅತ್ತಿದೆ. ಬಸ್ ನಲ್ಲಿದ್ದ ಕಂಡಕ್ಟರ್ ಗೆ ವೋಟು ಮಾಡುವ ಉದ್ದೇಶವನ್ನು ತಿಳಿಸಿದೆ. ಅವರು ಬೆಂಗಳೂರಿಗೆ ತೆರಳುವ ಜನರಿದ್ದಾರೆ ಏನಾದರೂ ಹೇಳುತ್ತಾರೆ? ಡ್ರೈವರ್ ನಿಲ್ಲಿಸದಿರಬಹುದು ಎಂದರು. ಮತ್ತೊಮ್ಮೆ ವಿನಂತಿಸಿಕೊಂಡೆ ಅವರು ಡ್ರೈವರ್ ಅನ್ನು ವಿನಂತಿಸಿಕೊಳ್ಳಲು ಸೂಚಿಸಿದರು. ಡ್ರೈವರ್ ಬಳಿ ವಿನಂತಿಸಿಕೊಂಡೆ. ತರೀಕೆರೆ ಮಿನಿ ವಿಧಾನಸೌಧದ ಬಳಿ ತೆರಳಿದಾಗ 5 ಗಂಟೆಗೆ 20 ನಿಮಿಷ ಬಾಕಿ ಇತ್ತು. ಮೊದಲೇ ಸಂಖ್ಯೆಯನ್ನು ಗುರುತಿಸಿ ಕೊಂಡಿದ್ದರಿಂದ ಬೇಗ ತೆರಳಿದೆ. ಆದರೆ ಇದು ಒತ್ತುವ ಮೆಶಿನ್ ಇರಲಿಲ್ಲ. ಪೇಪರ್ ಬ್ಯಾಲೆಟ್. ಮೊದಲ ಬಾರಿಗೆ ವೋಟ್ ಮಾಡುವುದಾಗಿತ್ತು. ಏನು ಮಾಡುವುದೆಂದು ತಿಳಿದಿರಲಿಲ್ಲ. ಅಲ್ಲಿಯೇ ಇದ್ದವರೊಬ್ಬರು ತಿಳಿಸಿದರು. ಮೊದಲು ಒಂದು ಪುಟಕ್ಕೆ ಸಹಿ ಆಕಿಸಿಕೊಂಡರು. ನಂತರದಲ್ಲಿ ಹಾಳೆಯನ್ನು ಕಿತ್ತುಕೊಟ್ಟು ಅಲ್ಲಿಯೇ ಇರುವ ಪೆನ್ ನಲ್ಲಿ ಗುರುತಿಸಲು ಹೇಳಿದರು ಮತ್ತು ಯಾರಿಗಾದರೂ ಒಬ್ಬರಿಗೆ ಕಡ್ಡಾಯವಾಗಿ 1 ಪ್ರಾಶಸ್ತ್ಯ ಮತ್ವನ್ನು ನೀಡಲೇ ಬೇಕು ಎಂದು ತಿಳಿಸಿದರು.ಬಲಗೈ ತೋರು ಬೆರಳಿನ ಉಗುರಿನ ಬುಡಕ್ಕೆ ಶಾಹಿಯನ್ನು ಹಾಕಿದರು. ಅಲ್ಲಿಯೇ ಇದ್ದ ಮಾರ್ಕರ್ ಪೆನ್ ನಿಂದ ಮೊದಲ ಪ್ರಾಶಸ್ತ್ಯ ಮತವನ್ನು ಗುರುತಿಸಿ ಬ್ಯಾಲೆಟ್ ಬಾಕ್ಸ್ ಗೆ ಆಕಿ ಮರಳಿದೆ.ಸೂಕ್ತ ಸಮಯದಲ್ಲಿ ನಿಗದಿತ ಸ್ಥಳದಲ್ಲಿ ಬಸ್ ನಿಲ್ಲಿಸಿದ ಚಾಲಕ ಮತ್ತು ಕಂಡಕ್ಟರ್ ಗೆ ನನ್ನ ವಂದನೆಗಳು.
ಆದರೆ ನನ್ನನ್ನು ಕಾಡಿದ ಕೆಳಕಾಣಿಸಿದ ಪ್ರಶ್ನೆಗಳಿಗೆ ಉತ್ತರ ನೀಡುವವರ್ಯಾರು.
1. ಮರುದಿನ 2ನೇ ಶನಿವಾರ ವಿದ್ದಿತು. ಆ ದಿನ ಚುನಾವಣೆ ಇದ್ದಿದ್ದರೆ ಇನ್ನು ಹೆಚ್ಚಿನ ಪ್ರಮಾಣದಲ್ಲಿ ವೋಟು ಚಲಾವಣೆ ಸಾಧ್ಯವಿದ್ದಿತು.
2. ಕನಿಷ್ಠ ಆ ದಿನ ಯಾವುದೇ ಮೀಟಿಂಗ್ ಗಳನ್ನು ಕರೆಯದಂತೆ ಆದೇಶ ಹೊರಡಿಸಿ ಪಟ್ಟಿಯಲ್ಲಿದ್ದವರಿಗೆ ರಜೆ ನೀಡಬಹುದಾಗಿದ್ದಿತು.
3. ಕಡ್ಡಾಯವಾಗಿ ಎಲ್ಲ ಸರಕಾರಿ, ಅರೆ ಸರಕಾರಿ,ಖಾಸಗಿ ಬಸ್ಸುಗಳು ವೋಟು ಮಾಡುವ ದಿನ ಯಾರಾದರೂ ಬೇಡಿಕೆ ಇಟ್ಟರೆ ಚುನಾವಣೆಯಲ್ಲಿ ಮತ ಚಲಾವಣೆ ಜಾಗಕ್ಕೆ ಹತ್ತಿರವಾದ ರಸ್ತೆಯಲ್ಲಿ/ಸ್ಥಳದಲ್ಲಿ ನಿಲ್ಲಿಸಲು ಸೂಕ್ತ ಮಾರ್ಗದರ್ಶನದ ಅವಶ್ಯಕತೆ.
3. ಕಡ್ಡಾಯವಾಗಿ ಎಲ್ಲ ಸರಕಾರಿ, ಅರೆ ಸರಕಾರಿ,ಖಾಸಗಿ ಬಸ್ಸುಗಳು ವೋಟು ಮಾಡುವ ದಿನ ಯಾರಾದರೂ ಬೇಡಿಕೆ ಇಟ್ಟರೆ ಚುನಾವಣೆಯಲ್ಲಿ ಮತ ಚಲಾವಣೆ ಜಾಗಕ್ಕೆ ಹತ್ತಿರವಾದ ರಸ್ತೆಯಲ್ಲಿ/ಸ್ಥಳದಲ್ಲಿ ನಿಲ್ಲಿಸಲು ಸೂಕ್ತ ಮಾರ್ಗದರ್ಶನದ ಅವಶ್ಯಕತೆ.
Comments