ವೀರಶೈವ ಧರ್ಮ - ಪ್ರಸ್ತುತ

ಹಾನಗಲ್ ಕುಮಾರೇಶ್ವರರು ಮತ್ತು ಶ್ರೀ ಬಸವಲಿಂಗ ಸ್ವಾಮಿಗಳು, ಹುಕ್ಕೇರಿ ಮಠ ಹಾವೇರಿ ಇವರು ವೀರಶೈವ ಮಹಾಸಭಾವನ್ನು ಕಟ್ಟಲು ದೇಶದಾದ್ಯಂತ ಸಂಚರಿಸಿರುತ್ತಾರೆ. ಇವರೀರ್ವರು ತಮಗೋಸ್ಕರ ಏನನ್ನು ಮಾಡಿಕೊಂಡಿಲ್ಲ. ವೀರಶೈವ ಸಮಾಜವನ್ನು ಒಗ್ಗೂಡಿಸಲು ಹಗಲು ಇರುಳು ಸಂಚರಿಸಿದರು. ಇವರು ಸಮಾಜಕ್ಕಾಗಿ ತಮ್ಮ ಬದುಕನ್ನು ಸಲ್ಲಿಸಿದರು. For the people ಅನ್ನುವ ಆಗೇ ತಮ್ಮ ಬದುಕನ್ನು ಚಿರಾಯುವಾಗಿಸಿದರು.

ಹಾನಗಲ್ ಕುಮಾರೇಶ್ವರರು ಭೀಕರ ಬರಗಾಲದ ಸಂದರ್ಭದಲ್ಲಿ ಮಠದ ಆಸ್ತಿಯನ್ನು, ನಗ- ನಾಣ್ಯವನ್ನು, ತಾಮ್ರದ ತಗಡುಗಳನ್ನು ಮಾರಿ ಜನರಿಗೆ ಊಟಕ್ಕಾಗಿ "ಗಂಜಿ" ಕೇಂದ್ರಗಳನ್ನು ತೆರೆದರು. ಮಠದ ಆಸ್ತಿಯನ್ನು ಮಾರಿದ್ದು ಜನರಿಗಾಗಿಯೇ ಒರತು ತಮಗಾಗಿ ಅಲ್ಲ. ದೇಶ ಸುಭೀಕ್ಷವಾದಾಗ ಮತ್ತೆ ಉಳ್ಳವರಿಂದ ಭಿಕ್ಷೆಯ ಮೂಲಕ ಆಸ್ತಿಯನ್ನು ಮಠಕ್ಕೆ ಮಾಡಿದರು. 

ಧಾರವಾಡದಲ್ಲಿ ಮೊದಲಬಾರಿಗೆ ಜರುಗಿದ ವೀರಶೈವ ಮಹಾಸಭಾದ ಸಭೆಯಲ್ಲಿ ಶ್ರೀ ಬಸವಲಿಂಗ ಸ್ವಾಮಿಗಳು ಕುಳಿತು ಸಭೆಯನ್ನು ಮುನ್ನಡೆಸಿದರು.

ಮಠಗಳು ಭಕ್ತರ ಮಠವಾಗಿರಬೇಕು. ಯಾವ ಒಂದು ರಾಜಕೀಯ ಪಕ್ಷದ ಸ್ವತ್ತಿನ ರೀತಿ ವರ್ತಿಸ ಬಾರದು. ಎಲ್ಲ ಪಕ್ಷಗಳು ಬರಬೇಕು. ಮಠ ಭಕ್ತರ ಪಕ್ಷವಾಗಿರಬೇಕು. ಮಠದಲ್ಲಿ ರಾಜಕೀಯವನ್ನು ತರಬಾರದು.

ವೀರಶೈವ ಮತ್ತು ಬಸವಣ್ಣನವರನ್ನು ಪ್ರತ್ಯೇಕಿಸುವ ಪ್ರಯತ್ನ ಶತಮಾನದ ಘೋರ ದುರಂತ. ಬಸವಣ್ಣ ನವರು ಎಲ್ಲರನ್ನು ನಮ್ಮ ಬಳಗದವರು ಎಂದರು. ಆದರೆ ಇಂದು ಬಸವಣ್ಣ ಲಿಂಗಾಯತ ಮತ ಸ್ಥಾಪಕ ಎಂದು ವೀರಶೈವದಿಂದ ಅವರನ್ನು ಬೇರ್ಪಡಿಸಲು ಪ್ರಯತ್ನಿಸುತ್ತಿರುವುದು ಶ್ರೀ ಬಸವಣ್ಣನವರಿಗೆ ಮಾಡಿದ, ಮಾಡುವ ದ್ರೋಹವಾಗಿದೆ.

ದೇಶದ ಪಾರ್ಲಿಮೆಂಟ್ ನಲ್ಲಿ ಬರೆಸಿರುವ "ಸರ್ವೇ ಜನೋಃ ಸುಖಿನೋ ಭವಂತುಃ" ಎಂಬ  ಉಕ್ತಿಯಂತೆ ವೀರಶೈವ ಮಠಗಳು ಬಾಳಿವೆ. ನೊಂದವರಿಗೆ ಹೊಸ ಚೈತನ್ಯವನ್ನು ನೀಡಿವೆ. ಹಸಿದವರಿಗೆ ಅನ್ನವನ್ನು ನೀಡಿವೆ, ಬಡ ಮಕ್ಕಳಿಗೆ ವಿದ್ಯೆಗೆ ಪೂರಕವಾಗಿ ಶಾಲಾ -ಕಾಲೇಜುಗಳು- ವಿದ್ಯಾಲಯಗಳನ್ನು ತೆರೆದು ವಿದ್ಯಾದಾನವನ್ನು ಮಾಡಿ ಶಕ್ತಿ- ಅನ್ನುಪೂರ್ಣೆ-ಶಾರದೆಯರ ಸಂಗಮ ಕ್ಷೇತ್ರಗಳಾಗಿವೆ.

ತಪೋನಿಷ್ಠರಾದ ಶ್ರೀ ಗಂಗಾಧರ ಶ್ರೀಗಳು "ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ" ಎಂದು ಸಾರಿ ಹೇಳಿದರು. ಇಂದು ಸ್ವಾಮಿಗಳು ಕಾರ್ಯಕ್ರಮಗಳ ಜೊತೆಗೆ ಶ್ರೀ ಗಂಗಾಧರ ಮಹಾಸ್ವಾಮಿಗಳಂತೆ ಕಾರಣೀಕರು, ತಪೋಬಲರು ಆಗ ಬೇಕಾದ ಅವಶ್ಯಕತೆ ಎದ್ದು ತೋರುತ್ತದೆ. ನಿಂತ ಜಾಗಕ್ಕೆ ಸಚಿವರನ್ನು ಮುಖ್ಯಮಂತ್ರಿಗಳನ್ನು ಕರೆಸಿ ಆದೇಶಿಸ ಬೇಕಾದ ಮಠಾಧೀಶ್ವರರು ಸಭೆಗಳನ್ನು ಮಾಡಿ ಮಾಡುತ್ತಿರುವುದು ಏನು? ಸಭೆಗಳಲ್ಲಿ ನಿಂದಿಸುವ ಬದಲು ಸಭೆಗೆ ಆಗಮಿಸಿದ ಎಲ್ಲರಿಂದಲೂ ಶಿವನ ಪೂಜೆಯಾಗಲಿ. ಮಠಾಧೀಶ್ವರರ ತಪೋ ಶಕ್ತಿ ಇನ್ನು ಅಗಾಧವಾಗಿ ಬೆಳೆಯುತ್ತದೆ. ಭಕ್ತರು ಬೆಳೆಯುತ್ತಾರೆ.

ರಾಜಕಾರಣಿಗಳು ರಾಜ್ಯದಲ್ಲಿ ಇಂದು ಚುನಾವರಣೆಯನ್ನು ಮೊದಲ್ಗೊಂಡು ಧರ್ಮದ ಹೆಸರಿನಲ್ಲಿ ಅರಾಜಕತೆಯನ್ನು ಉಂಟು ಮಾಡುತ್ತಿದ್ದಾರೆ. ಜನರ ಮನಸ್ಸಿನಲ್ಲಿ ಒಡಕನ್ನು ಮೂಡಿಸಿ ತಾವು ಸಂತೋಷ ಪಡುತ್ತ ವಿಕೃತ ಸಂತೋಷವನ್ನು ಅನುಭವಿಸುತ್ತಿದ್ದಾರೆ. ವಂಶ ಪಾರಂಪರ್ಯವಾಗಿ ವೀರಶೈವ ಮಠಾಧೀಶರನ್ನು ಆರಾಧಿಸಿದ ವ್ಯಕ್ತಿಗಳು ಇಂದು ವೀರಶೈವ ಧರ್ಮದಿಂದ ದೂರಾಗುವದರ ಯತ್ನದಲ್ಲಿ ವೀರಶೈವ ಧರ್ಮದ ಗುರುಗಳನ್ನು ಅವಮಾನಿಸುತ್ತಿದ್ದಾರೆ.

ಇಂದು ವೀರಶೈವ ಮಹಾಸಬಾವನ್ನು ಉಳಿಸುವ ಹೊಣೆಯಾರದ್ದು?. ಹಾವೇರಿ ಪ್ರಾಂತ್ಯದಲ್ಲಿ ಶ್ರೀ ಹಾನಗಲ್ ಕುಮಾರೇಶ್ವರರು ಮತ್ತು ಶ್ರೀ ಬಸಸವಲಿಂಗ ಮಹಾಸ್ವಾಮಿಗಳು ನಡೆದಾಡಿದ ,ಐಕ್ಯರಾಗಿಯೂ ಜನರಿಗೆ, ಭಕ್ತಿರಿಗೆ ದಾರಿ ತೋರುತ್ತಿರುವ ಮಹಾಮಹಿಮರು. ಇವರು ನಮ್ಮ ಹಿರಿಯರು. ನಮ್ಮ ಹಿರಿಯರು ಕಟ್ಟಿ ಬೆಳೆಸಿದ ಒಂದು ಸಂಸ್ಥೆಯನ್ನು, ಒಂದು ಸಂಘವನ್ನು, ಒಂದು ಒಕ್ಕೂಟವನ್ನು ಒಡೆಯಲು ಪರಕೀಯರು ಅಂಧರಾದ ನಮ್ಮವರೇ ಕೆಲವರು ಪ್ರಯತತ್ನಿಸುತ್ತಿರುವು ವಿಪರ್ಯಾಸವಲ್ಲದೇ ಮತ್ತೇನು! ನಮ್ಮ ಹಿರಿಯರು ಕಟ್ಟಿದ ಕೀರ್ತಿಯನ್ನು ಇನ್ನು ಎತ್ತರಕ್ಕೆ ಕೊಂಡೊಯ್ಯುವ ಕೆಲಸವಾಗ ಬೇಕು ಇಲ್ಲದಿದ್ದರೇ ಅನದನು ಉಳಿಸಿಕೊಂಡು ಹೋಗಬೇಕಾದ್ದು ಪ್ರಿಯ ಭಕ್ತರ ಕರ್ತವ್ಯ ಹಾಗೂ ನಿಷ್ಠೆ.

ನಮ್ಮ ದೇಶದಲ್ಲಿ ಹಲವು ಧರ್ಮಗಳಿವೆ, ಹಿಂದು, ಕ್ರೈಸ್ತ, ಮುಸಲ್ಮಾನ, ಜೈನ, ಬುದ್ದ, ಪಾರ್ಸಿ ಇನ್ನು ಮುಂತಾದವು. ಯಾರೂ ತಮ್ಮ ಧರ್ಮಕ್ಕೆ ಸೇರಿದ ಆಸ್ತಿಯನ್ನು ತಮಗಾಗಿ ಪರಭಾರೆ ಮಾಡಿಲ್ಲ, ಆದರೆ ಇಂದು ಸಮಾಜ ಒಡಕಿನ ಕಾರಣ ಸಮಾಜದ ಆಸ್ತಿ ಪರಭಾರೆಯಾಗುತ್ತಿದೆ. ಯಾವುದೇ ಒಂದು ಮಠಕ್ಕೆ ಸ್ವಾಮಿಯಾಗಿ ಆಯ್ಕೆಯಾದಲ್ಲಿ ಸ್ವಾಮಿಯಾದವನು ಸಮಾಜಕ್ಕಾಗಿ ಬದುಕಬೇಕು. ಸ್ವಾಮಿಗಳು ಸರ್ವಸಂಗ ಪರಿತ್ಯಾಗಿಗಳು. ವೀರಶೈವ ಧರ್ಮವನ್ನು ಉಳಿಸಿ, ಬೆಳೆಸಬೇಕಾದ್ದು ಪ್ರತಿಯೋರ್ವರ ಆದ್ಯ ಕರ್ತವ್ಯವಾಗಿದೆ. 

ಇಂದು ವೀರಶೈವ ಸಮಾಜದಲ್ಲಿ ಒಡಕು ತಂದವರು ನಾಳೆ ದಿನ ಬ್ರಾಹ್ಮಣ, ಜೈನ, ಭೌಧ್ದ, ಮುಸಲ್ಮಾನ, ಕ್ರೈಸ್ತ, ಪಾರ್ಸಿಗಳಲ್ಲಿ ಒಡಕು ತರುವುದಿಲ್ಲ ಎಂದು ಹೇಗೆ ನಂಬುವುದು. 

Comments

Popular posts from this blog

ವೀರಶೈವ ಪಂಚ ಪೀಠಗಳು

ಶ್ರೀ ಮ.ನಿ.ಪ್ರ ವಿರೂಪಾಕ್ಷ ಮಹಾಸ್ವಾಮಿಗಳು,ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಮಠ, ಜಂಗಮ ಕ್ಷೇತ್ರ, ತಿಪ್ಪಾಯಿಕೊಪ್ಪ ಕಿರು ಪರಿಚಯ

Sri Jagadguru 1008 Ujjaini Shrigalu @ Abbe tumkur fair - veerashaiva