ಕೊಡಗಿನ ಕಾವೇರಿ - ವಾತಾವರಣ- ಅಂತರ್ಜಲ- ನ್ಯಾಯ - ಪ್ರಕೃತಿ

ಕೊಡಗಿನ ಕಾವೇರಿ ಎಂದಿಗೆ ಮುಗಿಯುವುದು ಈ ಹೋರಾಟ. ಪ್ರತಿ ಸಾರಿ ಮಳೆಗಾಲ ಬಂತೆಂದರೆ ಈ ವಿಷಯ ಚರ್ಚೆಗೆ ಬರುತ್ತೆ.ಒಬ್ಬರಿಗೆ ಕುಡಿಯಲು ಬೇಕು ಮತ್ತೊಬ್ಬರಿಗೆ ಬೆಳೆ ಬೆಳೆಯಲು ಬೇಕು ಹೆಚ್ಚಾದ ನೀರು ಸಮುದ್ರಕ್ಕೆ ಪೋಲಾದರು ಸರಿ ಕನ್ನಡಿಗರಿಗೆ ಕುಡಿಯಲು ನೀರು ಇರಬಾರದು, ಔದ್ಯೋಗಿಕವಾಗಿ ಪ್ರಗತಿ ಕಂಡಿರುವ ಬೆಂಗಳೂರಿನಿಂದ ಉದ್ಯಮಗಳು ಕಾಲ್ಕೀಳಬೇಕು ಎನ್ನುವ ಮನೋಭಾವನೆ ಇರಬೇಕು ? ಮೊದಲು ಕುಡಿಯಲು ನೀರು ಕೊಡಿ. ನ್ಯಾಯಲಯದಲ್ಲಿ ನ್ಯಾಯದ ಮೇಲೆ ನಂಬಿಕೆ ಇದೆ ಆದರೆ ಅದು ತುಂಬ ತಡವಾಗಿ ಬರಬಾರದು ಏಕೆಂದರೆ ತುಂಬ ತಡವಾದರೆ ನೋಡಲು ನಾವಿರುವುದಿಲ್ಲವಲ್ಲ! ಗೌರವಾನ್ವಿತ ಮಿಶ್ರಾ ಜಿ ಸ್ವಲ್ಪ ಆಲೋಚಿಸಿ ನ್ಯಾಯ ಕೊಡ್ರಪ್ಪ ನಮ್ಮ ರಾಜ್ಯಕ್ಕೆ. 

ಹಳ್ಳಿ ಜನರಿಗೆ ನೀರು ಇಲ್ಲ ಅಂದ್ರೆ  ಬದುಕೋದಾದ್ರು ಹೆಂಗೆ? ನಮ್ಮಲ್ಲಿ ಡಾಕ್ಟರುಗಳು ಇಲ್ಲ ಅಕಸ್ಮಾತ್ ಏನಾದ್ರೂ ಆರೋಗ್ಯ ಕೇಂದ್ರಕ್ಕೆ ಓದ್ರೆ ಸರಕಾರ ಆ ಪ್ರೋಗ್ರಾಂ ಅಧಿಕಾರಿ ಈ ಪ್ರೋಗ್ರಾಂ ಅಧಿಕಾರಿ ಅಂತ ಮಾಡಿ ತಾಲೂಕ ಜಿಲ್ಲಾ ಮಟ್ಟದಲ್ಲಿ ಕೂರಿಸಿಬಿಟ್ಟಿದೆ. ತಿಂಗಳಲ್ಲಿ 6 ಮೀಟಿಂಗ್ 2 ಟ್ರೈನಿಂಗ್ ಆ ರಿಪೋರ್ಟ ಈ ರಿಪೋರ್ಟ ಅನುದಾನ ಖರ್ಚು ಮಾಡಿದ ಕಲರ್ ಜೆರಾಕ್ಸ್ ಓಚರ್ಸ ರೆಡಿ ಮಾಡ್ಬೇಕಲ್ಲ. ಡಾಕ್ಟ್ರೀ ಇಲ್ಲ ಸ್ಟ್ರೈಕ್ ಮಾಡ್ತಾರೆ ಮುಂಚೆ ವೇತನ ಜ್ಯಾಸ್ತಿ ಮಾಡ್ರಿ. ನಮ್ಮ ರಾಜ್ಯದಲ್ಲಿ ಒಬ್ಬ ಉತ್ತಮ ವಾಗ್ಮಿಯಾದ, ಜಾಣ ನ್ಯಾಯವಾದಿ ಇಲ್ವ?  ಬೇರೆ ರಾಜ್ಯ ದಿಂದ ಬಂದ ಲಾಯರ್ ಎಷ್ಟು ನಮ್ಮವರಾಗಿ ಕೆಲಸ ಮಾಡಲು ಸಾಧ್ಯ? 

ಈ ತೊಂದರೆ ಇರಬಾರದೆಂದರೆ ಮಳೆ ಚೆನ್ನಾಗಿ ಆಗಬೇಕು. ಮಳೆ ಆಗಬೇಕಾದರೆ ಪ್ರಕೃತಿಯನ್ನು ಸಂರಕ್ಷಿಸಬೇಕು, ಬೆಟ್ಟ ಗುಡ್ಡಗಳನ್ನು ನಾಶ ಪಡಿಸದೇ ಅವುಗಳನ್ನು ಬೆಳೆಸಬೇಕು. ಕೆರೆ - ಕಟ್ಟೆಗಳನ್ನು ದುರಾಸೆಯಿಂದ ನೆಲಸಮಗೊಳಿಸದೆ ಕಟ್ಟಡಗಳಿಂದ ಸಿಮೆಂಟ ಮಯಗೊಳಿಸದೆ ಕಾಪಾಡಿ ಅಂತರ್ಜಲ ಮಟ್ಟವನ್ನು ಹೆಚ್ಚಿಸಬೇಕು. ಆದರೆ ಇವುಗಳಲ್ಲಿ ಯಾರಿಗೆ ಆಸಕ್ತಿ ಇದೆ. ಸಾಫ್ಟವೇರ್ ಉದ್ಯಮ ದವರಿಗಿದೆಯಾ ? ಇಲ್ಲ ಬಿಲ್ಡರ್ಸ ಗಳಿಗಿದೆಯಾ ಇಲ್ಲ ರೈತರ ಜಮೀನನ್ನು ಖರೀದಿಸುವ ಡೆವೆಲಪರ್ಸ್ ಒತ್ತುವರಿದಾರರಿಗಿದೆಯಾ?

ಈ ಮೊದಲು ಟಿ.ವಿ ನಲ್ಲಿ ಪ್ರಕೃತಿ ಕುರಿತು ವಿಡಿಯೋ ಸಾಂಗ್ಸ ಬರ್ತಿದ್ವು ಆದ್ರೆ ಈಗ ಎಲ್ಲ ನಾಪತ್ತೆ. ಶಿವಮೊಗ್ಗದಿಂದ ಹಾವೇರಿ ಬರುವಾಗ ನೋಡಿದ್ರೆ ಸಾಲು ಸಾಲು  ಮರಗಳಿದ್ದ ಜಾಗದಲ್ಲಿ ಕಾಕೆ ಜೋಳ, ಭತ್ತ, ಕಬ್ಬು, ಅಡಿಕೆ ಬೆಳೆದಿದರೆ ಈಗಾದ್ರೆ ಹೆಂಗೆ? 

ಬೆಂಗಳೂರಿನಲ್ಲಿ ಟ್ಯಾಂಕರ್ ಮಾಫಿಯಾದವರ ಕೈವಾಡವು ಇರಬಹುದು ಈ ಗಲಾಟೆಯಲ್ಲಿ . ಯಾಕೆಂದರೆ Money ತುಂಬ ಮುಖ್ಯ. ಹೋಟೆಲ್ ನವರು ಇದನ್ನೆ ನೆಪವಾಗಿಸಿಕೊಂಡು 2 ಇಡ್ಲಿ ಬೆಲೆ ರೂ. 50 ಮಾಡಬಹುದು. 

Comments

Popular posts from this blog

ವೀರಶೈವ ಪಂಚ ಪೀಠಗಳು

ಶ್ರೀ ಮ.ನಿ.ಪ್ರ ವಿರೂಪಾಕ್ಷ ಮಹಾಸ್ವಾಮಿಗಳು,ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಮಠ, ಜಂಗಮ ಕ್ಷೇತ್ರ, ತಿಪ್ಪಾಯಿಕೊಪ್ಪ ಕಿರು ಪರಿಚಯ

Sri Jagadguru 1008 Ujjaini Shrigalu @ Abbe tumkur fair - veerashaiva