ಡಾ.ಶಿವಕುಮಾರ್ ಸ್ವಾಮೀಜಿ, ಸಿದ್ದಗಂಗಾ ಮಠ ಈ ಜಗದ ಶಿವ ಸ್ವರೂಪಿ ಗುರು
ಈ ದಿನ ಸಿದ್ಧ ಗಂಗ ಮಠಾಧೀಶರಾದ ಶ್ರೀ ಶಿವಕುಮಾರ ಸ್ವಾಮೀಜಿಯವರ 108 ನೇ ಜನ್ಮ ದಿನ. ಮಾನ್ಯರಾದ ಗುರುಗಳ ಚರಣಗಳಿಗೆ ನನ್ನ ಶಿರಸಾಷ್ಠಾಂಗ ನಮನಗಳು. ರಾಜ್ಯ, ದೇಶ, ವಿದೇಶ ಕಂಡ ಅಪ್ರತಿಮ ಸನ್ಯಾಸಿ. ತಪೋ ಧನರು, ಪೂಜಾನುಷ್ಠಾನ ಅವಿರತರು, ಕರ್ಮ ಯೋಗಿಗಳು, ಭಾರತ ದೇಶದ ಹಿಂದು ಪರಂಪರೆಯನ್ನು ಬೆಳೆಸಿದ ಅಪ್ರತಿಮ ಸಂತ. ಜ್ಞಾನ ದಾಸೋಹದ ಹರಿಕಾರರಿರವರು. ವಿದ್ಯಾಭ್ಯಾಸದ ಹರಿಕಾರರು ಆದ ಸಮಾಜ ಮುಖಿಯ ಅಪ್ರತಿಮ ಭಾರತೀಯ ಹಿಂದು ಪರಂಪರೆಯ ಪ್ರತೀಕವವಾದ ಇವರು ನಡೆದಾಡುವ ದೇವರು ಎನಿಸಿಕೊಂಡಿದ್ದಾರೆ. ಇವರು 01 ಏಪ್ರಿಲ್ 1907 ರಂದು ಮಾಗಡಿ ತಾಲೂಕಿನ ವೀರಾಪುರದಲ್ಲಿ ಜನಿಸಿದರು.
ಈ ದಿನ ಸಮಾಜದಲ್ಲಿ ವಿವಿಧ ತೆರನಾದ ಸ್ವಾಮೀಜಿಗಳನ್ನು, ಕಾವಿ ಧಾರಿಗಳನ್ನು ಕಾಣುತ್ತೇವೆ. ಕೆಲವರು ಕೆಲವೊಂದು ಜಾತಿಗೆ, ಧರ್ಮಕ್ಕೆ, ವರ್ಗಕ್ಕೆ ಮಾತ್ರ ಮೀಸಲಿದ್ದಾರೆ. ಆದರೆ ಸಿದ್ದ ಗಂಗ ಗುರುಗಳು ಎಲ್ಲದರಾಚೆ ಗೌರವಕ್ಕೆ ಹೆಸರಾದವರಾಗಿದ್ದಾರೆ.ಇಂದಿನ ಶಿಕ್ಷಣ ಮಾರುಕಟ್ಟೆಯಲ್ಲಿ , ವಿದ್ಯಾಭ್ಯಾಸಕ್ಕೆ ಮಾರುಕಟ್ಟೆಯ ಸೋಗು ತಗಲದ ಆಗೆ ಕಾರ್ಯ ನಿರ್ವಹಿಸುತ್ತಿರುವ ಮಾರ್ಗದರ್ಶಕರಿಗೆ ನನ್ನ ದೀರ್ಘದಂಡ ನಮಸ್ಕಾರಗಳು.
ಶಿಸ್ತು ಬದ್ದ ಜೀವನಕ್ಕೆ, ಶಿಸ್ತು ಬದ್ದ ಪೂಜೆ ನಿಯಮ, ಸಮಯಪಾಲನೆಯ ಪ್ರತೀಕ ಗುರುಗಳು. ಗುರು ಎಂಬ ಹೆಸರಿಗೆ ಅನ್ವರ್ಥವಾಗಿ ಬೆಳೆದಿರುವ ಮಹಾನ್ ಗುರುಗಳು ಶ್ರೀ ಸಿದ್ದಗಂಗಾ ಶಿವಕುಮಾರ್ ಸ್ವಾಮಿಗಳು
Comments