ಸಮ್ಮಿಲನ 2014-15 ಕೆ.ಎಚ್.ಪಿ.ಟಿ
ಸಮ್ಮಿಲನ ಪದವೇ ಆಕರ್ಷಕ. ಸಮ್ಮಿಲನ ಒಂದೆ ಕಡೆ ಒಂದೆ ವಿಧ ಯೋಚಿಸುವ, ಕೆಲಸ ಮಾಡುವ, ಚಿಂತಿಸುವ ಜನರನ್ನು ಒಂದೆಡೆ ಸೇರಿಸುವುದು. ಸಮ್ಮಿಲನ ಒಂದು ಧನಾತ್ಮಕವಾದ ಕಾರ್ಯಕ್ರಮ.
ದಿನಾಂಕ 13.03.2015 ರಂದು ಯಾದಗಿರಿ ಜಿಲ್ಲೆಯಲ್ಲಿ ಕೆ.ಎಚ್.ಪಿ.ಟಿಯವರು ಆಯೋಜಿಸಿದ್ದ ಸಮ್ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಅದರಲ್ಲಿ ಜೀವನದಲ್ಲಿ ಮೊದಲಬಾರಿಗೆ ಗಣ್ಯರ ಸ್ಥಾನದಲ್ಲಿ ಮಧ್ಯದ ಸೀಟಿನಲ್ಲಿ ಕುಳಿತುಕೊಳ್ಳುವ ಸುಯೋಗ ಬಂದಿತ್ತು. ಈ ಕಾರ್ಯಕ್ರಮದಲ್ಲಿ ಆಶಾ ಕಾರ್ಯ ಕರ್ತೆಯರು, ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು, ವೈದ್ಯರು, ಮಹಿಳಾ ಮತ್ತು ಮಕ್ಕಳ ಇಲಾಖೆಯವರು ಹಾಗೂ ಇತರರು ಭಾಗ ವಹಿಸಿದ್ದರು.
ಮಾತಾನಾಡುವುದು ನನ್ನ ಹವ್ಯಾಸವಲ್ಲ. ಈ ಸಭೆಗೆ ಅತಿಥಿಯಾಗಿ ಆಹ್ವಾನಿಸಿದ್ದರು. ನಾನು ಸಭೆಯಲ್ಲಿ ಮಾತಾನಾಡಲು ಟಿಪ್ಪಣಿಗಳನ್ನು ತಯಾರಿಸಿದ್ದೆ. ಆದರೆ ವಾಸ್ತವದಲ್ಲಿ ಟಿಪ್ಪಣಿಗಳ 5% ಮಾತ್ರ ನೆನಪಿನಲ್ಲಿತ್ತು. ಸಭೆಯಲ್ಲಿ ಮಾತಾನಾಡುವವರ ಸಂಖ್ಯೆ ಒಂದೊಂದಾಗಿ ಕಡಿಮೆಯಾಗುತ್ತಿದ್ದಂತೆ ಅವ್ಯಕ್ತ ಭಯ ಕಾಡುತ್ತಿತ್ತು. ಕೊನೆಗೂ ಮೈಕ್ ನನ್ನೆಡೆಗೆ ಬಂತು.
" ಸಭೆಯ ಮೇಲಿದ್ದ ಗಣ್ಯರನ್ನು ಹಾಗೂ ಸಭೆಗೆ ಆಗಮಿಸಿದ್ದವರನ್ನು ನೆನೆಸಿಕೊಮಡು ಕೆ.ಎಚ್.ಪಿ.ಟಿ ಏನು ಎಂದು ಸಭೆಗೆ ತಿಳಿಸಿದೆ.
ಸಭೆಯಲ್ಲಿ ಆಸೀನರಾಗಿರುವ ಗಣ್ಯರೇ, ಆಗೂ ಸಭೆಯಲ್ಲಿ ಉಪಸ್ಥಿತರಿರುವ ನನ್ನ ಅಕ್ಕ ತಂಗಿಯರೇ, ಮೊದಲು ಕೆ.ಎಚ್.ಪಿ.ಟಿ ಬಗ್ಗೆ ತಿಳಿದುಕೊಳ್ಳೋಣ . ಕೆ.ಎಚ್.ಪಿ.ಟಿ 2003 ರಲ್ಲಿ ತನ್ನ ಕಾರ್ಯವನ್ನು ಶುರುಮಾಡಿತು. ಅಂತರ ರಾಷ್ಟ್ರೀಯ ಮಟ್ಟದ ಒಂದು ವಿಶ್ವವಿದ್ಯಾಲಯದೊಂದಿಗೆ ಒಪ್ಪಂದ ಮಾಡಿಕೊಂಡು, ಎಚ್.ಐ.ವಿ, ಏಡ್ಸ, ತಾಯಿ ಮತ್ತು ಮಗುವಿನ ಆರೈಕೆ ಯಲ್ಲಿ ಸಮುದಾಯದ ಪಾಲುಗಾರಿಕೆ..
Comments