ನಾನು ಮತ್ತು ನನ್ನ ತಾತ

ಈ ಬರವಣಿಗೆಯ ತಾತ ನನ್ನ ತಾಯಿಯ ತಂದೆ. ಇತ್ತೀಚೆಗೆ 3 ತಿಂಗಳುಗಳ ಹಿಂದೆ ವೀರಶೈವ ಪದಕೋಶದ ಪ್ರಕಾರ ಶಿವಸಾಯುಜ್ಯವನ್ನೊಂದಿದರು. ಇವರ ಬಗ್ಗೆ ಬರೆಯಬೇಕು ಅನಿಸುತ್ತಿದೆ ಅದಕ್ಕೆ ಯೂನಿಕೋಡ್ ನಲ್ಲಿ ಬರೆಯುತ್ತಿದ್ದೇನೆ. ಈ ನನ್ನ ಬ್ಲಾಗ್ ಇರುವ ವರೆಗೂ ಅದಕ್ಕು ಮುಂದೆ ನನ್ನ ತಾತ ನೆಟ್ ನಲ್ಲಿ ಇರಲಿ ಎಂದು.

ನನ್ನ ತಾತ ಮೂಲತಃ ತರೀಕೆರೆ ತಾಲೂಕು ಕಾಟಿಗನೆರೆ ಗ್ರಾಮಕ್ಕೆ ಸೇರಿದ ಮಾಳಿಗೆ ವಂಶಸ್ಥರು. ನನ್ನ ಅಜ್ಜಿ ಶ್ರೀಮತಿ ಕಮಲಮ್ಮ ನವರು ಚಿಕ್ಕಾನವಂಗಲದ ಗ್ರಾಮಸ್ಥರು. ಮದುವೆಯಾದ ನಂತರ ಚಿಕ್ಕಾನವಂಗಲದಲ್ಲಿಯೇ ವಾಸ್ತಾವ್ಯ ಹೂಡಿದರು. ಬಡತನ, ದಾರಿದ್ರ್ಯಗಳು ಈ ದಂಪತಿಗಳ ನೆಮ್ಮದಿಯನ್ನು ಹಾಳು ಗೆಡವಲಿಲ್ಲ. ಚಲದಲ್ಲಿ ಬಡತನವನ್ನು, ದಾರಿದ್ರ್ಯವನ್ನು ದಿಟ್ಟ ತನದಿಂದ, ಛಲದಿಂದ ಎದುರಿಸಿದರು.

ಈ ದಂಪತಿಗೆ 5 ಜನ ಮಕ್ಕಳು, ಮೊದಲನೆಯವರು ಮತ್ತು ಐದನೆಯವರು ಗಂಡು ಮಕ್ಕಳು ನಡುವಿನ 3 ಜನ ಹೆಣ್ಣು ಮಕ್ಕಳು. ಆ ಸಮಯದಲ್ಲಿ ತಮ್ಮ ಆರ್ಥಿಕ ಪರಿಸ್ಥಿತಿಗನುಗುಣವಾಗಿ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಮಾಡಿಸಿದರು. ಮೊದಲನೆಯ ಮಗ ಕುಮಾರಸ್ವಾಮಿ ಶಿಕ್ಷಕರಾದರು. ಎರಡನೇಯ ಮಗ ಇಂದು ಸ್ವಂತ ಕಂಪನಿಯ ಮಾಲಿಕ. ಹೆಣ್ಣು ಮಕ್ಕಳನ್ನು ಅವರ ವಿಧಿಯನುಸಾರ ಆರ್ಹರಿಗೆ ಕೊಟ್ಟು ಮದುವೆ ಮಾಡಿದರು. 

ತಾತ ನಾನು ನನ್ನ ಅಣ್ಣ ಎಂದರೆ ಅಚ್ಚು ಮೆಚ್ಚು ಕಾರಣ ಬಹುಶಃ ನಮ್ಮ ಮನೆಯ ಬಡ ಆರ್ಥಿಕ ಸ್ಥಿತಿ ಇರಬಹುದು.

Comments

Popular posts from this blog

ವೀರಶೈವ ಪಂಚ ಪೀಠಗಳು

ಶ್ರೀ ಮ.ನಿ.ಪ್ರ ವಿರೂಪಾಕ್ಷ ಮಹಾಸ್ವಾಮಿಗಳು,ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಮಠ, ಜಂಗಮ ಕ್ಷೇತ್ರ, ತಿಪ್ಪಾಯಿಕೊಪ್ಪ ಕಿರು ಪರಿಚಯ

Sri Jagadguru 1008 Ujjaini Shrigalu @ Abbe tumkur fair - veerashaiva