ಶ್ರೀ ಸಿದ್ಧಾರೂಢ ತತ್ತ್ವಾಮೃತ ಫೆಬ್ರವರಿ ಮಾಸಪತ್ರಿಕೆಯಲ್ಲಿ ಶ್ರೀಮತಿ ಮನೋರಮಾ ಎಸ್.ಉಕ್ಕಲಿ ರವರ ಕೋಪ ಲೇಖನದ ಆಯ್ದ ಸಾಲುಗಳು.
“ಕಾಮ, ಕ್ರೋಧ, ಲೋಭ” ಇವು ಸ್ವಯಂ ನಾಶಕ್ಕೆ ಕಾರಣವಾಗಿರುವ ಮೂರು ದಾರಿಗಳು, ಸಿಟ್ಟಿನ ಕೈಗೆ ಎಂದೂ ಬುದ್ಧಿಯನ್ನು ಕೊಡಬಾರದು. ಹೀಗೆ ಕೊಟ್ಟರೆ ವಿಪತ್ತು, ಆಪತ್ತುಗಳು ಹೆಚ್ಚಾಗುವವು. ಸಿಟ್ಟು ನಮ್ಮನ್ನು ಕೊಂದು ಹಾಕುವಷ್ಟು ಶಕ್ತಿಶಾಲಿಯಾಗಿದೆ. ಸಿಟ್ಟಿನಿಂದ ಮಿತ್ರು ವೈರಿಯಾಗುತ್ತಾರೆ. ಧನ ಕನಕಗಳು ನಾಶವಾಗಿ ಹೋಗುತ್ತವೆ. ಸುಖ ನೆಮ್ಮದಿಗಳು ದೂರವಾಗಿ ದುಃಖ ಚಿಂತೆಗಳು ನಮ್ಮನ್ನು ಮುತ್ತಿಕೊಳ್ಳುತ್ತವೆ. ಆದ್ದರಿಂದ ಕಾಮ – ಕ್ರೋಧಾದಿಗಳನ್ನು ನಿಗ್ರಹಿಸಬೇಕು. ಅಂದರೆ ಮಾತ್ರ ಬುದ್ಧಿ ಹೇಳಿದಂತೆ ನಡೆಯಲು ಸಾಧ್ಯವಾಗುವುದು. ಈ ಅರಿಷಡ್ ವರ್ಗವನ್ನು ಜಯಿಸದ ಹೊರತು ಮನುಷ್ಯ ಏನನ್ನೂ ಜಯಿಸಲು ಸಾಧ್ಯವಾಗುವುದಿಲ್ಲ…