ಭಾರತ ದೇಶವು ಸರ್ವ ಧರ್ಮಗಳನ್ನು ಗೌರವಿಸುತ್ತದೆ. ಭಾರತ ದೇಶವು ಸಂವಿಧನಾತ್ಮಕವಾಗಿ ಎಲ್ಲಾ ಜಾತಿಗಳಿಗೂ ಸಮಾನತೆಯನ್ನು ನೀಡಿದೆ. ಪ್ರತಿಯೊಂದು ಜಾತಿ ಪ್ರತಿಯೊಂದು ಧರ್ಮಕ್ಕೂ ತಮ್ಮ ರೀತಿ, ನಿಯಮಗಳನ್ನು ಅನುಸರಿಸಲು ನೆರವು ನೀಡಿದೆ. ಎಲ್ಲಾ ಜಾತಿ ಧರ್ಮಗಳಂತೆ ಬ್ರಾಹ್ಮಣ ಜಾತಿಯು ಸಂವಿಧಾನಾತ್ಮಕವಾಗಿ ತನ್ನ ದೇವಾಲಯ, ತನ್ನ ಅಸ್ತಿತ್ವವಿರುವ ಕಡೆ ಬ್ರಾಹ್ಮಣತ್ವದ ನಿಯಮಾನುಸಾರ ಆಚರಣೆಗಳು, ನಿಯಮಗಳು ತತ್ವಗಳನ್ನು ಪಾಲಿಸಲು ಸಂವಿಧಾನವೇ ಹಕ್ಕನ್ನು ನೀಡಿರುತ್ತದೆ. ಬ್ರಾಹ್ಮಣ ವಿರೋಧಿ ನೀತಿಯು ಸಂವಿಧಾನಾ ವಿರೋಧಿಯಾಗಿದೆ. ಒಂದು ಜಾತಿ ಒಂದು ಧರ್ಮಕ್ಕೆ ಸಂವಿದಾನ ನೀಡಿರುವ ಶ್ರೀ ರಕ್ಷೆಯನ್ನು ಮೀರುತ್ತದೆ. ದೇಶದ ಹಾಗೂ ರಾಜ್ಯದ ಹಲವು ದೇವಾಲಯಗಳಲ್ಲಿ ಬ್ರಾಹ್ಮಣ ರೀತಿ, ರಿವಾಜುಗಳನ್ನು ಪಾಲಿಸಲಾಗುತ್ತದೆ. ಅದನ್ನು ಗೌರವಿಸಬೇಕಾದುದು ಎಲ್ಲರ ಆದ್ಯ ಕರ್ತವ್ಯವಾಗಿದೆ ಹಾಗೂ ಸಂವಿದಾನಕ್ಕೆ ಗೌರವ ನೀಡುವ ಮೂಲಕ ಸಂವಿದಾನ ರಚನೆಯಲ್ಲಿ ಭಾಗವಹಿಸಿದ ಗಣ್ಯರಿಗೆ ಗೌರವ ಸೂಚಿಸಿದಂತಾಗುತ್ತದೆ, ಅದರಲ್ಲೂ ಮುಖ್ಯವಾಗಿ ದೇಶದಲ್ಲಿ reservation ಪದ್ಧತಿಯನ್ನು ಜಾರಿಗೆ ತರಲು ಕಾರಣೀಭೂತರಾದ ಮಹಾನ್ ನಾಯಕ ಡಾ.ಬಿ.ಆರ್. ಅಂಬೇಡ್ಕರ್ ರವರಿಗೆ. ಬ್ರಾಹ್ಮಣರು ಯಾರ ವಿರೋಧಿಗಳು ಅಲ್ಲ. ಬ್ರಾಹ್ಮಣತ್ವವು ಯಾರಲ್ಲಿಯೂ ಪಕ್ಷಪಾತ ಮಾಡುವುದಿಲ್ಲ. ಯಾರಿಗೂ ಹೀಗೆ ಮಾಡಿ ಎಂದು ಬಲವಂತ ಮಾಡುವುದಿಲ್ಲ. ಹೀಗಿರುವಾಗಿ ಬ್ರಾಹ್ಮಣತ್ವದ ರೀತಿ ರಿವಾಜುಗಳಿಗನುಸಾರವಾಗಿ ...