Posts

Showing posts from June, 2018

ಪದವಿ ಧರ ಕ್ಷೇತ್ರದ ಚುನಾವಣೆ

       ದಿನಾಂಕ:08/06/2018 ರಂದು ಜಿಲ್ಲಾ ಮಟ್ಟದ ಆರೋಗ್ಯ ಕರ್ನಾಟಕ ಸಭೆಯನ್ನು ಮುಗಿಸಿಕೊಂಡು ಊರಿಗೆ ತೆರಳಿದೆ. ಇದೇ ದಿನ ಪದವಿ ಧರ ಕ್ಷೇತ್ರದ ಚುನಾವಣೆ ಇತ್ತು. ಸಂಜೆ 5ರೊಳಗೆ ತೆರಳಬೇಕಾದ ಅವಶ್ಯಕತೆ ಇತ್ತು. ರೂ500 ಅನ್ನು ಹೆಚ್ಚುವರಿಯಾಗಿ ಪಾವತಿಸಿ ಹೊನ್ನಾಳಿ ತಲುಪಿದೆ. ಜಿಟಿ - ಜಿಟಿ ಮಳೆ. ಶಿವಮೊಗ್ಗ ತೆರಳುವ ಬಸ್ ಬಂದಿತು. ನನ್ನ ಗಮನವೆಲ್ಲ ಕೈ - ಗಡಿಯಾರದ ಮೇಲೆಯೇ ನೆಟ್ಟಿತ್ತು. ಶಿವಮೊಗ್ಗ ಇಳಿದ ಕೂಡಲೇ ತರೀಕೆರೆ ಗೆ ತೆರಳುವ ಬಸ್ ಅತ್ತಿದೆ. ಬಸ್ ನಲ್ಲಿದ್ದ ಕಂಡಕ್ಟರ್ ಗೆ ವೋಟು ಮಾಡುವ ಉದ್ದೇಶವನ್ನು ತಿಳಿಸಿದೆ. ಅವರು ಬೆಂಗಳೂರಿಗೆ ತೆರಳುವ ಜನರಿದ್ದಾರೆ ಏನಾದರೂ ಹೇಳುತ್ತಾರೆ? ಡ್ರೈವರ್ ನಿಲ್ಲಿಸದಿರಬಹುದು ಎಂದರು. ಮತ್ತೊಮ್ಮೆ ವಿನಂತಿಸಿಕೊಂಡೆ ಅವರು ಡ್ರೈವರ್ ಅನ್ನು ವಿನಂತಿಸಿಕೊಳ್ಳಲು ಸೂಚಿಸಿದರು. ಡ್ರೈವರ್ ಬಳಿ ವಿನಂತಿಸಿಕೊಂಡೆ. ತರೀಕೆರೆ ಮಿನಿ ವಿಧಾನಸೌಧದ ಬಳಿ ತೆರಳಿದಾಗ 5 ಗಂಟೆಗೆ 20 ನಿಮಿಷ ಬಾಕಿ ಇತ್ತು. ಮೊದಲೇ ಸಂಖ್ಯೆಯನ್ನು ಗುರುತಿಸಿ ಕೊಂಡಿದ್ದರಿಂದ ಬೇಗ ತೆರಳಿದೆ. ಆದರೆ ಇದು ಒತ್ತುವ ಮೆಶಿನ್ ಇರಲಿಲ್ಲ. ಪೇಪರ್ ಬ್ಯಾಲೆಟ್. ಮೊದಲ ಬಾರಿಗೆ ವೋಟ್ ಮಾಡುವುದಾಗಿತ್ತು. ಏನು ಮಾಡುವುದೆಂದು ತಿಳಿದಿರಲಿಲ್ಲ. ಅಲ್ಲಿಯೇ ಇದ್ದವರೊಬ್ಬರು ತಿಳಿಸಿದರು. ಮೊದಲು ಒಂದು ಪುಟಕ್ಕೆ ಸಹಿ ಆಕಿಸಿಕೊಂಡರು. ನಂತರದಲ್ಲಿ ಹಾಳೆಯನ್ನು ಕಿತ್ತುಕೊಟ್ಟು ಅಲ್ಲಿಯೇ ಇರುವ ಪೆನ್ ನಲ್ಲಿ ಗುರುತಿಸಲು ಹೇಳಿದರು ಮ...