Posts

Showing posts from March, 2015

ಶ್ರೀ ಸಿದ್ಧಾರೂಢ ತತ್ತ್ವಾಮೃತ ಫೆಬ್ರವರಿ ಮಾಸಪತ್ರಿಕೆಯಲ್ಲಿ ಶ್ರೀಮತಿ ಮನೋರಮಾ ಎಸ್.ಉಕ್ಕಲಿ ರವರ ಕೋಪ ಲೇಖನದ ಆಯ್ದ ಸಾಲುಗಳು.

“ಕಾಮ, ಕ್ರೋಧ, ಲೋಭ” ಇವು ಸ್ವಯಂ ನಾಶಕ್ಕೆ ಕಾರಣವಾಗಿರುವ ಮೂರು ದಾರಿಗಳು, ಸಿಟ್ಟಿನ ಕೈಗೆ ಎಂದೂ ಬುದ್ಧಿಯನ್ನು ಕೊಡಬಾರದು. ಹೀಗೆ ಕೊಟ್ಟರೆ ವಿಪತ್ತು, ಆಪತ್ತುಗಳು ಹೆಚ್ಚಾಗುವವು. ಸಿಟ್ಟು ನಮ್ಮನ್ನು ಕೊಂದು ಹಾಕುವಷ್ಟು ಶಕ್ತಿಶಾಲಿಯಾಗಿದೆ. ಸಿಟ್ಟಿನಿಂದ ಮಿತ್ರು ವೈರಿಯಾಗುತ್ತಾರೆ. ಧನ ಕನಕಗಳು ನಾಶವಾಗಿ ಹೋಗುತ್ತವೆ. ಸುಖ ನೆಮ್ಮದಿಗಳು ದೂರವಾಗಿ ದುಃಖ ಚಿಂತೆಗಳು ನಮ್ಮನ್ನು ಮುತ್ತಿಕೊಳ್ಳುತ್ತವೆ. ಆದ್ದರಿಂದ ಕಾಮ – ಕ್ರೋಧಾದಿಗಳನ್ನು ನಿಗ್ರಹಿಸಬೇಕು. ಅಂದರೆ ಮಾತ್ರ ಬುದ್ಧಿ ಹೇಳಿದಂತೆ ನಡೆಯಲು ಸಾಧ್ಯವಾಗುವುದು. ಈ ಅರಿಷಡ್ ವರ್ಗವನ್ನು ಜಯಿಸದ ಹೊರತು ಮನುಷ್ಯ ಏನನ್ನೂ ಜಯಿಸಲು ಸಾಧ್ಯವಾಗುವುದಿಲ್ಲ…  

ಸಮ್ಮಿಲನ 2014-15 ಕೆ.ಎಚ್.ಪಿ.ಟಿ

              ಸಮ್ಮಿಲನ ಪದವೇ ಆಕರ್ಷಕ. ಸಮ್ಮಿಲನ ಒಂದೆ ಕಡೆ ಒಂದೆ ವಿಧ ಯೋಚಿಸುವ, ಕೆಲಸ ಮಾಡುವ, ಚಿಂತಿಸುವ ಜನರನ್ನು ಒಂದೆಡೆ ಸೇರಿಸುವುದು. ಸಮ್ಮಿಲನ ಒಂದು ಧನಾತ್ಮಕವಾದ ಕಾರ್ಯಕ್ರಮ.              ದಿನಾಂಕ 13.03.2015 ರಂದು ಯಾದಗಿರಿ ಜಿಲ್ಲೆಯಲ್ಲಿ ಕೆ.ಎಚ್.ಪಿ.ಟಿಯವರು ಆಯೋಜಿಸಿದ್ದ ಸಮ್ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಅದರಲ್ಲಿ ಜೀವನದಲ್ಲಿ ಮೊದಲಬಾರಿಗೆ ಗಣ್ಯರ ಸ್ಥಾನದಲ್ಲಿ ಮಧ್ಯದ  ಸೀಟಿನಲ್ಲಿ ಕುಳಿತುಕೊಳ್ಳುವ ಸುಯೋಗ ಬಂದಿತ್ತು. ಈ ಕಾರ್ಯಕ್ರಮದಲ್ಲಿ ಆಶಾ ಕಾರ್ಯ ಕರ್ತೆಯರು, ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು, ವೈದ್ಯರು, ಮಹಿಳಾ ಮತ್ತು ಮಕ್ಕಳ ಇಲಾಖೆಯವರು ಹಾಗೂ ಇತರರು ಭಾಗ ವಹಿಸಿದ್ದರು.             ಮಾತಾನಾಡುವುದು ನನ್ನ ಹವ್ಯಾಸವಲ್ಲ. ಈ ಸಭೆಗೆ ಅತಿಥಿಯಾಗಿ ಆಹ್ವಾನಿಸಿದ್ದರು. ನಾನು ಸಭೆಯಲ್ಲಿ ಮಾತಾನಾಡಲು ಟಿಪ್ಪಣಿಗಳನ್ನು ತಯಾರಿಸಿದ್ದೆ. ಆದರೆ ವಾಸ್ತವದಲ್ಲಿ ಟಿಪ್ಪಣಿಗಳ 5% ಮಾತ್ರ ನೆನಪಿನಲ್ಲಿತ್ತು. ಸಭೆಯಲ್ಲಿ ಮಾತಾನಾಡುವವರ ಸಂಖ್ಯೆ ಒಂದೊಂದಾಗಿ ಕಡಿಮೆಯಾಗುತ್ತಿದ್ದಂತೆ ಅವ್ಯಕ್ತ ಭಯ ಕಾಡುತ್ತಿತ್ತು. ಕೊನೆಗೂ ಮೈಕ್ ನನ್ನೆಡೆಗೆ ಬಂತು.   " ಸಭೆಯ ಮೇಲಿದ್ದ ಗ...

Maternity Leave

As per the Maternity act of 1961 the every women who worked for a period of minimum  of 80 days is eligible for Maternity benefit.