Posts

Showing posts from July, 2016

ಸರ್ಕಾರಿ ಬಸ್ ಪ್ರತಿ ಭಟನೆ

ಕೆ.ಎಸ್.ಆರ್.ಟಿ.ಸಿ ಮತ್ತು ಬಿ.ಎಂ.ಟಿ.ಸಿ ಬಸ್ ನೌಕರರು ತಮ್ಮ ವಿವಿಧ ಬೇಡಿಕೆಗಳ ಹೀಡೆರಿಕೆಗಾಗಿ ದಿನಾಂಕ:24/07/2016 ರಿಂದಲೇ ಪ್ರತಿಭಟನೆಗಿಳಿದಿದ್ದಾರೆ.  ಕೆಲವು ಕಡೆ ನೌಕರರೇ ಬಸ್ ಗಳಿಗೆ ಕಲ್ಲು ತೂರಿದ್ದಾರೆ. ಕೆಲವೆಡೆ ಚಕ್ರದ ಗಾಳಿ ತೆಗೆದಿದ್ದಾರೆ. ಕೆಲಸ ಮಾಡಲು ಬಂದ ನೌಕರರ ಮೇಲೆ ಹಲ್ಲೆ ಮಾಡಿದ್ದಾರೆ. ಕೆಲಸ ಮಾಡಲು ಬಂದ ಚಾಲಕನಿಗೆ ಮದ್ಯಪಾನ ಮಾಡಿಸಿ ಸೀಟಿನಲ್ಲಿ ಕೂರಿಸಿದ್ದಾರೆ. ಒಂದು ದಿನಕ್ಕೆ ಸುಮಾರು ಕೋಟಿ ರೂ. ನಷ್ಟ ಮಾಡಿದ್ದಾರೆ... ಇದು ಯಾರ ದುಡ್ಡು? ಜನಸಾಮಾನ್ಯರ ದುಡ್ಡು. ಪ್ರತಿಯೊಬ್ಬ ತೆರೆಗೆ ಪಾವತಿದಾರನ ಹಣ. ಸರ್ಕಾರ ನಿರ್ದಾರ ತೆಗೆದುಕೊಳ್ಳುವಲ್ಲಿ ಎಡವಿದುದರ ಪರಿಣಾಮ ಈ ಪ್ರತಿ ಭಟನೆ. ಈ ದಿನ ಕೆ.ಎಸ್.ಆರ್.ಟಿ.ಸಿ ಕಾರ್ಪೋರೇಶನ್ ರವರು ನಾಳೆ ಮತ್ತೊಬ್ಬರು ... ಪ್ರತಿಯೊಂದಕ್ಕು ಒಂದೊಂದು ನಿಯಮವಿದೆ. ಪ್ರತಿಯೊಬ್ಬ ವ್ಯಕ್ತಿಯು ಕೆಲಸ ನಿರ್ವಹಿಸುವಾಗ  ಇದೇ ರೀತಿಯಾಗಿ ಕೆಲಸ ನಿರ್ವಹಿಸಬೇಕೆಂಬ ನಿಯಮಗಳಿದ್ದಾವೆ. ಕಂಡಕ್ಟರ್  ರವರಿಗೆ ಪ್ರಶ್ನೆ ಕೇಳಬೇಕು. ಎಷ್ಟು ಜನರಿಗೆ ದಿನದಲ್ಲಿ ತಮ್ಮಲ್ಲಿ ಚಿಲ್ಲರೆ ಇದ್ದರು ಒಂದು ರೂಪಾಯಿ ಇಲ್ಲ ಎಂದು ಕಳುಹಿಸಿ ಹಣ ಗಳಿಸುತ್ತೀರಾ?  ಎಷ್ಟು ಜನ ಕಂಡಕ್ಟರ್ ಕೊಟ್ಟ ಟಿಕೆಟ್ ಅನ್ನೆ ಪ್ರಯಾಣಿಕರಿಂದ ವಾಪಸ್ಸು ಪಡೆದು ಮತ್ತೊಬ್ಬ ಪ್ರಯಾಣಿಕರಿಗೆ ನೀಡುವುದಿಲ್ಲ? ಎಷ್ಟು ಜನರ ಬಳಿ ಟಿಕೆಟ್ ನೀಡದೇ ಹಣ ಪಡೆಯುತ್ತೀರಾ?