RKS
ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿ ವೃಂದದಲ್ಲಿ ಆರ್.ಕೆ.ಎಸ್ ಎಂದು ಪರಿಚಿತರಿರುವವರು ರುದ್ರಯ್ಯ ಕುಮಾರಸ್ವಾಮಿ. ಇವರು ನನ್ನ ಸೋದರ ಮಾವ. ನನ್ನ ತಾಯಿಯ ಅಣ್ಣ. ನನ್ನ ಹಾಗೂ ನನ್ನ ಅಣ್ಣನ ವಿದ್ಯಾಭ್ಯಾಸ ಜವಾಬ್ದಾರಿಯನ್ನು ಹೊತ್ತು ಶಕ್ಷಣ ನೀಡಿ ಕಾಪಾಡಿದ ನಿಜ ದೈವ. ಒಮ್ಮೆ ನನ್ನ ಅಣ್ಣನಿಗೆ ಆಟವಾಡುವಾಗ ಕಾಲಿಗೆ ಗಾಜು ಸೀಳಿ ರಕ್ತ ಬರುತ್ತಿತ್ತು . ನನ್ನ ಮಾವನವರು ಆ ದಿನ ತುಂಬ ನೊಂದು ಕೊಂಡರು. ಗಾಯವನ್ನು ತೊಳೆದು. ಮಡಿ ಬಟ್ಟಯಲ್ಲಿ ಕಟ್ಟಿ ವೈದ್ಯರ ಬಳಿ ಕರೆದೊಯ್ದಿದ್ದರು.