ಸವಣೂರಿನ ಹುಣಸೆ ಮರಗಳು

ಭಾರತೀಯರಲಿ ನಮ್ಮ ಇತಿಹಾಸದ ಬಗ್ಗೆ ಗೌರವ ಕಡಿಮೆ.ನಮ್ಮ ಇತಿಹಾಸದ ಕುರುಹುಗಳನ್ನು ನಾಶ ಪಡಿಸಿ ಹೊಸ ಕಟ್ಟಡಗಳನ್ನು, ಕ್ರೀಡಾಂಗಣಗಳನ್ನು, ವಸತಿ ಸಮುಚ್ಚಯಗಳನ್ನು ಕಟ್ಟಿಕೊಳ್ಳುತ್ತೇವೆ. ತೆರೆದ ಬಾವಿಗಳನ್ನು ಮುಚ್ಚಲಾಗುತ್ತದೆ, ಊರಿಗೆ ನೀರಿನ  ಆಸರೆಯಾದ ಕೆರೆಗಳನ್ನು ಆಕ್ರಮಿಸಿ ನೀರಿನ ಮೂಲವಿಲ್ಲದಂತೆ ಮಾಡಿ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗುತ್ತೇವೆ.

ಸವಣೂರು ನಗರದಲ್ಲಿ ಜಗತ್ಪ್ರಸಿದ್ದವಾದ ಹುಣಸೆ ಮರಗಳಿವೆ. ಗಜಗಾತ್ರದ ಕಾಂಡದ ಹುಣಸೆ ಮರಗಳು. 

ಆದರೆ ಕ್ರೀಡಾಂಗಣಕ್ಕಾಗಿ ಮರದ ರೆಂಬೆಯನ್ನ ಕತ್ತರಿಸಿರುವುದು ನಮ್ಮ ಇತಿಹಾಸದೊಂದಿಗೆ ನಮ್ಮ ಸಂಬಂಧವನ್ನು ಕತ್ತರಿಸಿಕೊಂಡಿರುವುದಕ್ಕೆ ಸಾಕ್ಷಿಯಾಗಿದೆ. ಬೇರೆ ದೇಶಗಳಲ್ಲಿ - ಯಾವ ದೇಶದಲ್ಲಿ ಜನರಿಗೆ ಸರ್ಕಾರಕ್ಕೆ ತಮ್ಮ ಇತಿಹಾಸದ ಬಗ್ಗೆ ಗೌರವವಿದೆಯೋ ಅವರು ಇತಹಾಸದ ಕುರುಹುಗಳನ್ನು ರಕ್ಷಿಸುತ್ತಾರೆ, ಕಾಪಾಡುತ್ತಾರೆ ಮುಂದಿನ ಪೀಳಿಗೆಗಾಗಿ.

ಸವಣೂರು ನಗರ ಪಾಲಿಕೆಯವರು ಅಥವಾ ಇಂಜಿನಿಯರ್ ಮನಸ್ಸು ಮಾಡಿದ್ದರೆ ಹುಣಸೆ ಮರದ ರೆಂಬೆ ಕಡಿಯುವ ಬದಲು ರೆಂಬೆ ಇರುವಷ್ಟು ಜಾಗವನ್ನು ಬಿಟ್ಟು ಗೋಡೆ ಕಟ್ಟಬಹುದಾಗಿತ್ತು. 

Comments

Popular posts from this blog

ವೀರಶೈವ ಪಂಚ ಪೀಠಗಳು

ಶ್ರೀ ಮ.ನಿ.ಪ್ರ ವಿರೂಪಾಕ್ಷ ಮಹಾಸ್ವಾಮಿಗಳು,ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಮಠ, ಜಂಗಮ ಕ್ಷೇತ್ರ, ತಿಪ್ಪಾಯಿಕೊಪ್ಪ ಕಿರು ಪರಿಚಯ

Sri Jagadguru 1008 Ujjaini Shrigalu @ Abbe tumkur fair - veerashaiva