ಹತ್ತೊಂಬತ್ತು ಒಂಟೆಗಳು
🐪 *
ಒಂದು ಹಳ್ಳಿಯಲ್ಲಿ ಒಬ್ಬ ವ್ಯಕ್ತಿ 19 ಒಂಟೆಗಳನ್ನು ಹೊಂದಿದ್ದನು. ಒಂದು ದಿನ ಅವನು ಅಸು ನೀಗಿದನು.
ಆತನ ಮರಣದ ಅನಂತರ ಅವನು ಬರೆದಿದ್ದ ಉಯಿಲನ್ನು ಊರಿನ ಪಂಚಾಯ್ತಿಯಲ್ಲಿ ಓದಲಾಯಿತು.
ಅದರಲ್ಲಿ ಹೀಗೆ ಬರೆಯಲಾಗಿತ್ತು :
ನನ್ನ ಬಳಿಯಲ್ಲಿ 19 ಒಂಟೆಗಳಿವೆ.
🌹ಅವುಗಳಲ್ಲಿ ಅರ್ಧದಷ್ಟು ಒಂಟೆಗಳನ್ನು ನನ್ನ ಮಗನಿಗೆ ನೀಡಬೇಕು.
🌹ನಾಲ್ಕನೇ ಒಂದು ಭಾಗವನ್ನು ನನ್ನ ಮಗಳಿಗೆ ನೀಡಬೇಕು.
🌹ಐದನೇ ಒಂದು ಭಾಗವನ್ನು ನನ್ನ ಸೇವಕನಿಗೆ ನೀಡಬೇಕು.
🌹ಈ ವಿಭಜನೆ ಹೇಗೆ ಆಗಬೇಕು ?
ಎಲ್ಲರೂ ಗೊಂದಲಕ್ಕೆ ಒಳಗಾಗಿದ್ದರು?
🌹19 ಒಂಟೆಗಳಲ್ಲಿ ಅರ್ಧದಷ್ಟು, ಅಂದರೆ 9.5 ರಷ್ಟು ಒಂಟೆಗಳನ್ನು ಮಗನಿಗೆ ಕೊಡಬೇಕು
ಅಂದರೆ ಒಂದು ಒಂಟೆಯನ್ನು ಕತ್ತರಿಸಬೇಕಾಗುತ್ತದೆ!!
🌹19 ಒಂಟೆಗಳಲ್ಲಿ ನಾಲ್ಕನೇ ಒಂದು ಭಾಗ ಅಂದರೆ 4.75 ಒಂಟೆಗಳನ್ನು ಮಗಳಿಗೆ ಕೊಡಬೇಕು
ಅಂದರೆ ಮತ್ತೊಂದು ಒಂಟೆಯನ್ನು ಕತ್ತರಿಸಬೇಕಾಗುತ್ತದೆ!!
🌹19 ಒಂಟೆಗಳಲ್ಲಿ ಐದನೇ ಒಂದು ಭಾಗ ಅಂದರೆ 3.80 ರಷ್ಟು ಒಂಟೆಗಳನ್ನು ಸೇವಕನಿಗೆ ನೀಡಬೇಕು. ಅಂದರೆ ಮಗದೊಂದು ಒಂಟೆಯನ್ನು ಕತ್ತರಿಸಬೇಕಾಗುತ್ತದೆ!!
🌹ಎಲ್ಲರೂ ತುಂಬಾ ಗೊಂದಲದಲ್ಲಿದ್ದಾಗ ಪಕ್ಕದ ಹಳ್ಳಿಯಿಂದ ಒಬ್ಬ ಬುದ್ಧಿವಂತನನ್ನು ಕರೆಸಲಾಯಿತು. ಆ ಬುದ್ದಿವಂತ ತನ್ನ ಒಂಟೆಯ ಮೇಲೆ ಸವಾರಿ ಮಾಡಿಕೊಂಡು ಬಂದು ಸಮಸ್ಯೆಯನ್ನು ಆಲಿಸಿದ. ತನ್ನ ಮನಸ್ಸಿನಲ್ಲೇ ಲೆಕ್ಕಾಚಾರ ಮಾಡಿಕೊಂಡು ಅನಂತರ, ಈ 19 ಒಂಟೆಗಳ ನಡುವೆ ನನ್ನ ಒಂಟೆಯನ್ನು ಸೇರಿಸಿ ಹಂಚಿರಿ ಎಂದನು.
🌹ಎಲ್ಲರೂ ಇಲ್ಲೊಬ್ಬ ವಿಚಿತ್ರ ವ್ಯಕ್ತಿ ಬಂದಿದ್ದಾನೆ, ತನ್ನ ಒಂಟೆಯನ್ನು ಇವರ ನಡುವೆ ಹಂಚಬೇಕು ಎಂದು ಹೇಳುವ ಇವನ್ನೊಬ್ಬ ಹುಚ್ಚ ಎಂದು ಭಾವಿಸಿದರು. ಆದರೂ ವಿಷಯವನ್ನು ಒಪ್ಪಿ ಕೊಳ್ಳುವುದರಿಂದ ಏನು ತೊಂದರೆ ಎಂದು ಎಲ್ಲರೂ ಯೋಚಿಸಿದರು.
🌹19 + 1 = 20 ಒಂಟೆಗಳಾದವು.
🌹20 ರ ಅರ್ಧದಷ್ಟು 10 ಒಂಟೆಗಳನ್ನು ಮಗನಿಗೆ ನೀಡಿದ.
🌹20 ರಲ್ಲಿ ನಾಲ್ಕನೇ ಒಂದು ಭಾಗ ಅಂದರೆ 5 ಒಂಟೆಗಳನ್ನು ಮಗಳಿಗೆ ನೀಡಿದ.
🌹20 ರಲ್ಲಿ ಐದನೇ ಒಂದು ಭಾಗ ಅಂದರೆ 4 ಒಂಟೆಗಳನ್ನು ಸೇವಕನಿಗೆ ನೀಡಿದ
ಅಲ್ಲಿಗೆ 10 + 5 + 4 = 19 ಒಂಟೆಗಳಾದವು.
🌹ಅಲ್ಲಿ ಈಗ ಒಂದು ಒಂಟೆ ಉಳಿದಿದೆ, ಅದು ಆ ಬುದ್ಧಿವಂತ ವ್ಯಕ್ತಿಗೆ ಸೇರಿದ್ದು.
🌹ಅವನು ಅದನ್ನು ಹತ್ತಿಕೊಂಡು ತನ್ನ ಹಳ್ಳಿಗೆ ಹಿಂತಿರುಗಿದ.
🌹ಹೀಗೆ 1 ಒಂಟೆಯನ್ನು 19 ಒಂಟೆಗಳ ಜೊತೆಯಲ್ಲಿ ಸೇರಿಸಿ ಯಾವುದೇ ಒಂಟೆಯನ್ನು ಕತ್ತರಿಸದೇ ಮರಣ ಹೊಂದಿದ ಆ ವ್ಯಕ್ತಿಯ ಉಯಿಲಿನಲ್ಲಿರುವಂತೆಯೇ ಹಂಚಲಾಯಿತು.
🌹ಅಂತೆಯೇ, ನಮ್ಮೆಲ್ಲರ ಜೀವನದಲ್ಲಿ 19 ಒಂಟೆಗಳಿವೆ.
5 ಇಂದ್ರಿಯಗಳು
(ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮ)
5 ಕರ್ಮೇಂದ್ರಿಯಗಳು
(ಕೈಗಳು, ಕಾಲುಗಳು, ನಾಲಿಗೆ, ಮೂತ್ರನಾಳ, ಗುದದ್ವಾರ)
5 ಆತ್ಮಗಳು
(ಪ್ರಾಣ, ಅಪಾನ, ಸಮಾನ, ವ್ಯಾನ, ಉದಾನ)ಮತ್ತು
4 ಆತ್ಮ ಸಾಕ್ಷಿಗಳು
(ಮನಸ್ಸು, ಬುದ್ಧಿ, ಚಿತ್ತ, ಅಹಂಕಾರ)
🌹ಒಟ್ಟು 19 ಒಂಟೆಗಳಿವೆ.
Comments