ನೋವೆಲ್ ಕರೋನಾ ವೈರಸ್ ರಾಜಕೀಯ ದೊಂಬರಾಟಗಳ ನಡುವೆ ಜಗತ್ತನ್ನು ಪ್ರಕೃತಿ ದತ್ತವಾಗಿ ತನ್ನೆಡೆ ಸೆಳೆದುಕೊಂಡು ವೈದ್ಯಕೀಯ ಜಗತ್ತಿಗೆ, ಜಗತ್ತಿನ ವೈದ್ಯಕೀಯ ವ್ಯವಸ್ಥೆಯ ಗುಣಮಟ್ಟವನ್ನು, ವೈದ್ಯಕೀಯ ಸೇವೆ ನೀಡುವಲ್ಲಿ ರಾಷ್ಟ್ರ ರಾಷ್ಟ್ರಗಳ ನಡುವಿನ ಹಂತರ, ವೈದ್ಯಕೀಯ ಸಿದ್ಧತೆಗಳನ್ನು ಜಗತ್ತಿಗೆ ಸಾರಿ, ಪಂಜಾಬ್ ನಿಂದ ಹಿಮಾಲಯ ವನ್ನು ನೋಡುವಷ್ಟು ವಾತಾವರಣವನ್ನು ತಿಳಿಗೊಳಿಸಿ ಕಲುಷಿತ ಮುಕ್ತ ಗೊಳಿಸಿದ ಕರೋನಾ, ಗಂಗಾ ನದಿಯ ನೀರು ಶುಭ್ರವಾಗಿ ಸ್ವಚ್ಚವಾಗಿ ಹರಿಯುವಂತೆ ಮಾಡಿದ ಕರೋನಾ ವೈರಸ್ ಮಾನವನ ಅನಾರೋಗ್ಯಕರ ವರ್ತನೆಗಳ ವಿರೋಧಿಯಾದರು ಕರೋನಾ ಪ್ರಕೃತಿ ಪ್ರೀತಿ, ನಿಸರ್ಗ ಪ್ರಿಯರಿಗೆ ಸಂತಸವನ್ನು ತಂದಿದೆ. ಶಾಲೆಗೆ ತೆರಳಿದ ಮಕ್ಕಳು ಪರೀಕ್ಷೆ ಇಲ್ಲದೆ ಪಾಸಾಗಿದ್ದಾರೆ, ರಜೆ ಎಂದರೆ ಸಮ್ಮರ್ ಕ್ಯಾಂಪ್, ಕೋಚಿಂಗ್ ತರಗತಿಗಳಿಗೆ ಸೇರಿಕೊಳ್ಳುತ್ತಿದ್ದ ಮಕ್ಕಳು ಇಂದು ಅಜ್ಜ, ಅಜ್ಜಿಯರ ಮನೆಗೆ ತೆರಳಿದ್ದಾರೆ ಇದರಿಂದ ಅಜ್ಜ, ಅಜ್ಜಿಯರಿಗೆ ಮಕ್ಕಳನ್ನು ನೋಡುವ ಭಾಗ್ಯ ದೊರೆತಿರುವುದರ ಜೊತೆಗೆ ಮೊಮ್ಮಕ್ಕಳೊಡನೆ ಕಾಲಕಳೆಯುವ ಸಮಯವು ಲಭ್ಯವಾಗಿದೆ, ಮೊಮ್ಮಕ್ಕಳಿಗೆ ಯಾವ ಸಂಸ್ತೆಯು ನೀಡಲಾಗದ ಪ್ರೀತಿ ಶಿಕ್ಷಣ ದೊರೆತಿದೆ. ಕೆಲವು ಅಜ್ಜ ಅಜ್ಜಿಯಂದಿರು ಖುಷಿಯಿಂದ ದೈವಾಧೀನರಾಗಿದ್ದಾರೆ. ಜನರಲ್ಲಿ ಕಾಣೆಯಾಗಿದ್ದ ಸಹಬಾಳ್ವೆ, ಸಹನೆ, ಕೂಡು ಕುಟುಂಬ, Self Hygiene, ಹೊರಗಿನಿಂದ ಬಂದಾಗ ಕೈ ಕಾಲು ತೊಳೆಯುವ ಅಭ್ಯಾಸ, ಮನೆಯ ಹೊರಗಡೆ ಪಾದರಕ್ಷೆಗಳನ್ನು...